

ತುಮಕೂರು: ನಾವು ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ, ಹೆಮ್ಮೆ ಮತ್ತು ಗೌರವ ಇದ್ದಾಗ ಮಾತ್ರ ಆತ್ಮತೃಪ್ತಿ ಸಾಧ್ಯ ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಹೇಳಿದರು.
ತುಮಕೂರು ವಿವಿಯಲ್ಲಿ ತುಮಕೂರು ಎಚ್.ಆರ್. ಫೋರಂ(ಮಾನವ ಸಂಪನ್ಮೂಲ ವೇದಿಕೆ) ಮಾನವ ಸಂಪನ್ಮೂಲ ವೃತ್ತಿಪರರು ಮತ್ತು ಕಾರ್ಖಾನೆ ಅಧಿಕಾರಿಗಳಿಗಾಗಿ ಬುಧವಾರ ಆಯೋಜಿಸಿದ್ದ ಸಂವಾದ ಗೋಷ್ಠಿ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಒಳಿತು ಬಯಸುವವರನ್ನು ಮಾನವ ಸಂಪನ್ಮೂಲ ವ್ಯಕ್ತಿ ಎನ್ನಬಹುದು. ಸೋಲನ್ನು ಸ್ಪೂರ್ತಿಯಾಗಿ ಸ್ವೀಕರಿಸಬೇಕು. ನಾವು ಮಾಡುವ ಕೆಲಸದಲ್ಲಿ ನಮಗೆ ಸಂತೋಷ ಇರಬೇಕು. ಖುಷಿಯಿಂದ ಕೆಲಸ ಮಾಡಿದಾಗ ಯಾವ ಕೆಲಸವಾದರೂ ಸಂತೋಷವನ್ನು ನೀಡುತ್ತದೆ ಎಂದರು.
ಕಾರ್ಖಾನೆಗಳ ಇಲಾಖೆ ನಿವೃತ್ತ ಗೆಜೆಟೆಡ್ ಮ್ಯಾನೇಜರ್ ಎಂ.ಸಿ.ನರಸಿAಹಮೂರ್ತಿ,
ಬೆಂಗಳೂರಿನ ಬಾಯ್ಲರ್ಸ್ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಕಾರ್ಖಾನೆಗಳ ಜಂಟಿ ನಿರ್ದೇಶಕ ಆರ್.ಕೆ.ಪಾರ್ಥಸಾರಥಿ, ವಿವಿ ಕುಲಸಚಿವೆ ನಾಹಿದಾ ಜಮ್‌ಜಮ್, ತುಮಕೂರು ಬಾಯ್ಲರ್ಸ್ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಕಾರ್ಖಾನೆಗಳ ಉಪನಿರ್ದೇಶಕ ಕೆ.ಎಸ್.ಕೃಷ್ಣಪ್ಪ, ತುಮಕೂರು ಪ್ರಾದೇಶಿಕ ಪಿಎಫ್ ಕಮಿಷನರ್ ಶಾಲಾಬ್ ದುಬೆ, ತುಮಕೂರು ಎಚ್.ಆರ್.ಫೋರಂ ಅಧ್ಯಕ್ಷ ಎನ್.ಗೋವಿಂದರಾಜು, ಉಪಾಧ್ಯಕ್ಷ ಪ್ರೊ.ಕೆ.ಜಿ.ಪರಶುರಾಮ್, ಕಾರ್ಯದರ್ಶಿ ಎಲ್.ಆರ್.ಚಿದಾನಂದ, ಕೋಶಾಧಿಕಾರಿ ಮಂಜುನಾಥ ನಾಯಕ್, ಶ್ರೀನಿಧಿ, ಪಾಂಡುರAಗ ಇದ್ದರು.