ತುಮಕೂರಿನಲ್ಲಿ ಗಣಪತಿ ವಿಸರ್ಜನಾ ಮಹೋತ್ಸವದ ಮೆರುಗು

01
Published on

ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆ ದೇವಾಲಯಲ್ಲಿ ಸ್ಥಾಪಿಸಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಶನಿವಾರ ಅದ್ಧೂರಿಯಾಗಿ ನೆರವೇರಿತು. ವಿವಿಧ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು.

ವಿಶ್ವ ಹಿಂದೂ ಪರಿಷದ್, ಬಜರಂಗದಳ ದ ನೇತೃತ್ವದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ 6ನೇ ವರ್ಷದ ಹಿಂದೂ ಮಹಾ ಗಣಪತಿಯ ಅದ್ದೂರಿ ವಿಸರ್ಜನಾ ಮಹೋತ್ಸವಕ್ಕೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಚಾಲನೆ ನೀಡಿದರು.

ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯ ಸ್ವಾಮಿಜಿ, ತಂಗನಹಳ್ಳಿ ಮಠದ ಶ್ರೀಬಸಲಿಂಗಸ್ವಾಮೀಜಿ, ಬೆಳ್ಳಾವೆಯ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಅರೆ ಶಂಕರ ಮಠದ ಶ್ರೀಚೈತನ್ಯ ಮಹಾಸ್ವಾಮೀಜಿ ಭಾಗವಹಿಸಿದ್ದರು.

ಗಣಪತಿ ಮೂರ್ತಿಯೊಂದಿಗೆ ಸಿದ್ದಗಂಗಾ ಮಠದ ಹಿರಿಯ ಶ್ರೀಡಾ.ಶಿವಕುಮಾರಸ್ವಾಮೀಜಿ, ದತ್ತಾತ್ರೇಯ, ಬಜರಂಗಿ, ಲೋಕಮಾನ ತಿಲಕ್ ಅವರುಗಳ ಸ್ತಬ್ದ ಚಿತ್ರಗಳ ಮೆರವಣಿಗೆ ಕೂಡ ನಡೆಯಿತು.

ಮೆರವಣಿಗೆಯಲ್ಲಿ ಪುಣೇರಿ ಡೋಲ್, ನಂದಿ ದ್ವಜ, ವೀರಗಾಸೆ, ಡಂಕವಾದ್ಯ, ತಮಟೆವಾದ್ಯ, ಡಿ.ಜೆ.,ಪಟಾಕಿ, ಸಿಡಿಮದ್ದುಗಳು ಪ್ರದರ್ಶನ ದೊಂದಿಗೆ ನಗರದ ಬಿ.ಜಿ.ಎಸ್ ವೃತ್ತದಿಂದ ಆರಂಭಗೊAಡು ಲಕ್ಕಪ್ಪ ವೃತ್ತದಿಂದ,ಜೆ.ಸಿ.ರಸ್ತೆ ಮೂಲಕ ಮಾರ್ಕೆಟ್ ಮಾರ್ಗವಾಗಿ ಮಂಡಿಪೇಟೆ, ಸ್ವತಂತ್ರö್ಯ ಚೌಕ, ಆಶೋಕ ರಸ್ತೆ,ಬಿ.ಎಚ್.ರಸ್ತೆ,ಎಂ.ಜಿ.ರಸ್ತೆ,ಜೈನ್ ಟೆಂಪಲ್ ರಸ್ತೆ,ರಾಮಪ್ಪ ವೃತ್ತ, ಅಂಬೇಡ್ಕರ್ ರಸ್ತೆಯ ಮೂಲಕ ಕೋಟೆ ಆಂಜನೇಯಸ್ವಾಮಿ ವೃತ್ತ ತಲುಪಿತ್ತು.

ತದನತರ ಗಾರ್ಡನ್ ರಸ್ತೆ ಮಾರ್ಗವಾಗಿ ಚಿಕ್ಕಪೇಟೆಯ ಕೆ.ಎನ್.ಎಸ್.ರೈಸ್ ಮಿಲ್ ಹಿಂಭಾಗದಲ್ಲಿರುವ ಕಲ್ಯಾಣಿಯಲ್ಲಿ ವಿಸರ್ಜಿಸಲಾಯಿತು.

ಮೆರವಣಿಗೆಯಲ್ಲಿ ಮಹಾಗಣಪತಿ ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್, ಗೌರವಾಧ್ಯಕ್ಷ ಸಿ.ವಿ.ಮಹದೇವಯ್ಯ, ಕಾರ್ಯದರ್ಶಿ ಜಿ.ಕೆ.ಶ್ರೀನಿವಾಸ್, ಕೋರಿಮಂಜುನಾಥ್, ಸಹಕಾರ್ಯದರ್ಶಿ ನರಸಿಂಹಮೂರ್ತಿ, ಆರ್.ಎಲ್.ರಮೇಶಬಾಬು, ಖಜಾಂಚಿ ಆರ್.ಎಲ್.ರಮೇಶ್‌ಬಾಬು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net