2.50ಕೋಟಿ ರೂ. ವೆಚ್ಚದಲ್ಲಿ ಹೆತ್ತೇನಹಳ್ಳಿ ಶ್ರೀಆದಿಶಕ್ತಿ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ

272727
Published on

ತುಮಕೂರು: ತಾಲೂಕಿನ ಹೆತ್ತೇನಹಳ್ಳಿ ಶ್ರೀಆದಿಶಕ್ತಿ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಭೂಮಿ ಪೂಜೆ ಭಾನುವಾರ ಸಕಲ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಶಾಸಕ ಬಿ.ಸುರೇಶ್‌ಗೌಡ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ದೇವಾಲಯ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ವಾಸ್ತು ಶಿಲ್ಪ ಮತ್ತು ತಾಂತ್ರಿಕತೆ ಒಳಗೊಂಡಿರಲಿದೆ ಎಂದರು.

ದೇವಸ್ಥಾನ ನಿರ್ಮಾಣಕ್ಕೆ ಭಕ್ತರು ತನು, ಮನ, ಧನ ಸಹಾಯದ ಅವಶ್ಯಕತೆಯಿದ್ದು ಎಲ್ಲರೂ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ಸಾರುವ ಹೆತ್ತೇನಹಳ್ಳಿ ಮಾರಮ್ಮ, ಕೈದಾಳ ಚೆನ್ನಕೇಶವ, ಗೂಳೂರು ಗಣೇಶ, ಸೇರಿದಂತೆ 10 ಹಲವು ವೈಶಿಷ್ಟö್ಯಗಳ ಇತಿಹಾಸ ಇರುವ ದೇವಾಲಯಗಳಲ್ಲಿ ಮೂಲಸೌಕರ್ಯ ಒದಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪತಹಸೀಲ್ದಾರ್ ಭಾನುಪ್ರಕಾಶ್, ಕಂದಾಯ ನಿರೀಕ್ಷಕ ರಮೇಶ್, ಜಿಪಂ ಮಾಜಿ ಸದಸ್ಯ ಗೂಳೂರು ಶಿವಕುಮಾರ್, ರಾಮಚಂದ್ರಪ್ಪ, ಸಿದ್ದೇಗೌಡ, ನರಸಿಂಹಮೂರ್ತಿ, ಶಂಕರ್, ಹೆತ್ತೇನಹಳ್ಳಿ ವೆಂಕಟೇಶ್, ರವಿ ಮತ್ತಿತರರು ಇದ್ದರು.

ಕುರಿ ಹಾಲು ನೊರೆ ಚಂದ ,ಹೆತ್ತೇನಹಳ್ಳಿ ಮಾರಮ್ಮನ ವಾಗ್ದಾನ ಚಂದ:
ಹೆತ್ತೇನಹಳ್ಳಿ ಶ್ರೀಆದಿಶಕ್ತಿ ಮಾರಮ್ಮ ದೇವಸ್ಥಾನ 1235ರಲ್ಲಿ ನಿರ್ಮಾಣ ಮಾಡಲಾಗಿದೆ. ಯಾದವ ಸಮುದಾಯದ ಕುರಿಗಾಹಿ ಕುರಿಗಳನ್ನು ಬಿಟ್ಟು ರಾತ್ರಿ ಮಲಗುವ ಮುನ್ನ ಅಡುಗೆ ಮಾಡಲು ಅಲ್ಲಿದ್ದಂತ ಕಲ್ಲುಗಳನ್ನು ಬಳಕೆ ಮಾಡಿ ಅಡುಗೆ ಮಾಡಲು ಹೋದಾಗ ಅವನು ಸಾಕಿರುವ ಸಾವಿರಾರು ಕುರಿಗಳು ಏಕ ಕಾಲಕ್ಕೆ ಅಸುನೀಗುತ್ತವೆ.
ಇದನ್ನು ಕಂಡು ಕಂಗಾಲಾದ ಕುರಿಗಾಹಿ ದಿಕ್ಕು ತೋಚದಂತಾಗಿ ಕೊರವಂಜನ ರೂಪದಲ್ಲಿ ಬಂದAತ ದೇವಿಯೂ ಕುರಿ ಹಾಲಿನಲ್ಲಿ ನನ್ನ ಗುಡಿ ಕಟ್ಟಿಸುವುದಾಗಿ ಪ್ರಾರ್ಥನೆ ಮಾಡಿಕೋ ನಿನ್ನ ಕುರಿಗಳು ಬದುಕುತ್ತವೆ ಎಂದು ಹೇಳುತ್ತದೆ ಕೊರವಂಜಿ ಹೇಳಿದಂತೆ ಕುರಿಗಾಹಿ ಪ್ರಾರ್ಥಿಸಿಕೊಳ್ಳುತ್ತಾನೆ ತರುವಾಯ ಕುರಿಗಳು ಬದುಕುತ್ತವೆ, ಅದೇ ಕುರಿಗಳ ಹಾಲಿನಿಂದ ಗರ್ಭಗುಡಿಯನ್ನು ಕಟ್ಟಿರುವ ಐಹಿತ್ಯವಿದೆ. `ಕುರಿ ಹಾಲಿನ ನೊರೆ ಚಂದ, ಹೆತ್ತೇನಹಳ್ಳಿ ಮಾರಮ್ಮನ ವಾಗ್ದಾನ ಚಂದ' ಎಂಬ ನಾಣ್ಣುಡಿ ಈ ಭಾಗದಲ್ಲಿ ಪ್ರಚಲಿತದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net