

ತುಮಕೂರು: ತಾಲೂಕಿನ ಹೆಗ್ಗೆರೆ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ವಿದ್ಯಾರ್ಥಿ ಸ್ನೇಹಿ ಗ್ರಂಥಾಲಯ ಅಭಿಯಾನ ಕಾರ್ಯಕ್ರಮಕ್ಕೆ ಶನಿವಾರ ಪಿಡಿಒ ರಾಘವೇಂದ್ರ ಚಾಲನೆ ನೀಡಿ ಮಾತನಾಡಿದರು.
ಪಂಚಾಯತಿ ವ್ಯಾಪ್ತಿಯಲ್ಲಿ ಬಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಮಕ್ಕಳ ಶೈಕ್ಷಣಿಕ ಹಾಗೂ ಕೌಶಲಾಭಿವೃದ್ಧಿಗೆ ಅನುಕೂಲವಾಗುವಂತೆ ಡಿಜಿಟಲ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಗ್ರಂಥಾಲಯದಲ್ಲಿ ಡಿಜಿ ವಿಕಸನ ಕಾರ್ಯಕ್ರಮದಿಂದ ನೀಡಿರುವ ಸಾಧನಗಳಾದ ಟಿವಿ, ಸ್ಮಾರ್ಟ್ಪೋಟನ್, ಇಂಟರ್‌ನೆಟ್ ಸದ್ಬಳಕೆ ಮಾಡಿಕೊಳ್ಳಿ ಎಂದರು.
ರಾಜ್ಯ ಗ್ರಂಥಪಾಲಕರ ಸಂಘದ ಉಪಾಧ್ಯಕ್ಷ ಸಿರಿವರ ಶಿವಮೂರ್ತಿ ಮಾತನಾಡಿ, ಗ್ರಂಥಾಲಯ ಗಳು ಡಿಜಿಟಲ್ ಸ್ಪಾರ್ಶ ಪಡೆದು ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ಡಿ.ಆರ್.ನಿಂಗಪ್ಪ, ಪ್ರೌಢಶಾಲೆ ಮುಖ್ಯ ಶಿಕ್ಷಕ ಪಾತಣ್ಣ, ಜಿಲ್ಲಾ ಮೇಲ್ವಿಚಾರಕ ಸಂಘದ ಉಪಾಧ್ಯಕ್ಷೆ ಸಾವಿತ್ರಮ್ಮ, ಗ್ರಾಪಂ ಸದಸ್ಯೆ ನಾಗರತ್ನಮ್ಮ, ಡಿಜಿಟಲ್ ಗ್ರಂಥಾಲಯ ಮೇಲ್ವಿಚಾರಕ ವಸಂತ ಕುಮಾರ ಹಾಗೂ ಶಿಕ್ಷಣ ಫೌಂಡೇಶನ್ ತಾಲೂಕು ಸಂಯೋಜಕ ವೆಂಕಟೇಶ ಮತ್ತಿತರರು ಇದ್ದರು.