

ತುಮಕೂರು: ಕಾರ್ಯಕರ್ತರು ನಮ್ಮ ಜತೆಗಿರುವವರೆಗೂ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾರಿಹಾಯ್ದರು.
ತುರುವೇಕೆರೆ ತಾಲೂಕು ತಾವರೆಕೆರೆಯಲ್ಲಿ ಶ್ರೀತೋಪಿರಾಯಸ್ವಾಮಿ ನೂತನ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇವೇಗೌಡರು ಎರಡು ಕ್ಷೇತ್ರದಲ್ಲಿ ನಿಂತು ಸೋತ ಕಾಲದಲ್ಲಿಯೇ 4 ರಿಂದ 60 ಸ್ಥಾನಗಳಿಸಿ ಜೆಡಿಎಸ್ ಅಧಿಕಾರಕ್ಕೆ ಬಂದಿದೆ, ಈಗ 19 ಸೀಟು ಗೆದ್ದು ಹೆದರುವ ಪ್ರಶ್ನೆಯೇ ಇಲ್ಲ ಎಂದರು.
ರಾಜ್ಯ ಸರ್ಕಾರ ಅವೈe್ಞÁನಿಕವಾಗಿ ಯೋಜನೆ ಜಾರಿಗೊಳಿಸಿ ಅಭಿವೃದ್ಧಿಯನ್ನು ಮರೆತಿದೆ, ಗ್ಯಾರಂಟಿ ಕಾರ್ಯಕ್ರಮಗಳಿಗಾಗಿ ಅಭಿವೃದ್ಧಿಗೆ ಹಣ ಕೇಳದಂತೆ ಶಾಸಕರಿಗೆ ತಾಕೀತು ಮಾಡಲಾಗಿದೆ. ರಾಜ್ಯದಲ್ಲಿ ಸಾಕಷ್ಟು ತೆರಿಗೆ ಸಂಗ್ರಹಣಯಾಗುತ್ತಿದ್ದು ಅಭಿವೃದ್ಧಿಗೂ ಹಣ ನೀಡಬೇಕು ಎಂದು ಆಗ್ರಹಿಸಿದರು.
ನಾನು ಹಣ ತೆಗೆದುಕೊಂಡು ಎಂದೂ ಅಧಿಕಾರಿಗಳ ವರ್ಗಾವಣೆ ಮಾಡಿಲ್ಲ. ಎಲ್‌ಒಸಿ ನೀಡಲು ಯಾರ ಬಳಿ ಹಣ ಪಡೆದಿಲ್ಲ ಅದ್ದರಿಂದ ನಾನು ಇಂದು ಸರ್ಕಾರದ ವಿರುದ್ಧ ದೈರ್ಯವಾಗಿ ಮಾತನಾಡುತ್ತೇನೆ, ಬಿಜೆಪಿಯವರಂತೆ ನಾನು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಇದ್ದರು.