ಮಾತೃ ಪಕ್ಷ ಜೆಡಿಎಸ್‌ಗೆ ಎಚ್.ನಿಂಗಪ್ಪ ವಾಪಸ್?

HDD
Published on

ತುಮಕೂರು: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಪಕ್ಷಾಂತರ ಪರ್ವ ಆರಂಭವಾಗಿದೆ. ಕಾಂಗ್ರೆಸ್‌ನಲ್ಲಿದ್ದ ಕುಣಿಗಲ್ ಕ್ಷೇತ್ರದ ಮಾಜಿ ಶಾಸಕ ಎಚ್.ನಿಂಗಪ್ಪ ಮಾತೃ ಪಕ್ಷ ಜೆಡಿಎಸ್‌ಗೆ ಮರುವುದು ನಿಶ್ಚಯವಾಗಿದೆ.

ತುಮಕೂರಿನಲ್ಲಿ ಪ್ರಚಾರ ಸಭೆಗೆ ಆಗಮಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶನಿವಾರ ಎಚ್.ನಿಂಗಪ್ಪ ಅವರ ತುಮಕೂರಿನ ನಿವಾಸಕ್ಕೆ ತೆರಳಿ ಊಟ ಮಾಡಿರುವುದು ಕಾಂಗ್ರೆಸ್ ತೊರೆಯುವುದನ್ನು ಖಚಿತಪಡಿಸಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಸಿ.ಗೌರಿಶಂಕರ್ ಜೆಡಿಎಸ್ ತೊರೆದ ನಂತರ ಶಕ್ತಿಗುಂದಿರುವ ಪಕ್ಷಕ್ಕೆ ಟಾನಿಕ್ ನೀಡಲು ಎಚ್.ನಿಂಗಪ್ಪಗೆ ಜೆಡಿಎಸ್ ಮತ್ತೆ ಮಣೆಯಾಕಿದೆ.

ಜೆಡಿಎಸ್ ಪಕ್ಷದಿಂದ ನಾಲ್ಕು ಸೋಲಿನ ನಂತರ 2004ರಲ್ಲಿ ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ವಿರುದ್ಧ ಎಚ್.ನಿಂಗಪ್ಪ ಗೆದ್ದು ಶಾಸಕರಾಗಿದ್ದರು. ನಂತರ ಕೆಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಸುತ್ತಾಟ ನಡೆಸಿದ್ದ ಅವರು ಈಗ ಮಾತೃ ಪಕ್ಷಕ್ಕೆ ಮರಣಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಪ್ರಚಾರಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಎಚ್.ನಿಂಗಪ್ಪ ಮನೆಗೆ ಭೇಟಿ ನೀಡಿದ ದೇವೇಗೌಡರು ಸೊಪ್ಪಿನ ಸಾರು, ಮುದ್ದೆ ಸವಿದು ಪಕ್ಷಕ್ಕೆ ಆಹ್ವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net