

ತುಮಕೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಲೋಕಾಸಭಾ ವ್ಯಾಪ್ತಿಯ 8 ಕ್ಷೇತ್ರದಲ್ಲಿ ಜೆಡಿಎಸ್ 469218 ಮತ ಪಡೆದಿದ್ದು ಮೊದಲ ಸ್ಥಾನದಲ್ಲಿದ್ದರೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎಂಬ ಮಾತಿದೆ.
2019ರಲ್ಲಿ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಜೆಡಿಎಸ್ ಕೈಲಿದ್ದರೂ, ಖುದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕಣಕ್ಕಿಳಿಸಿ ಕಾಂಗ್ರೆಸ್ ಬೆಂಬಲವಿದ್ದರೂ ಗೆಲ್ಲಲು ಸಾಧ್ಯವಾಗಿಲ್ಲ ಹಾಗಾಗಿ, ಕ್ಷೇತ್ರದಲ್ಲಿ ಇನ್ಯಾರೇ ಸ್ಫರ್ಧಿಸಿದರೂ ಮತದಾರರು ರಾಷ್ಟಿçÃಯ ಪಕ್ಷಕ್ಕೆ ಆದ್ಯತೆ ನೀಡಿರುವ ಉದಾಹರಣೆಯಿಂದ ಜೆಡಿಎಸ್‌ನಲ್ಲಿ ಸ್ಫರ್ಧೆಗೆ ಹೆಚ್ಚು ಒಲವು ತೋರಿಸುತ್ತಿಲ್ಲ.
ಮುಂದಿನ ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗುವ ಸಾಧ್ಯತೆ ಕೂಡ ಇದ್ದು ತುಮಕೂರು ಕ್ಷೇತ್ರದಲ್ಲಿ ಹೆಚ್ಚು ಭಾರಿ ಗೆದ್ದಿರುವ ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆಯಿದ್ದು, 2019ರಂತೆಯೇ ರಾಜಕೀಯ ಸಮೀಕರಣ ಬದಲಾದರೂ ಆಶ್ಚರ್ಯವಿಲ್ಲ.
ಜನತಾದಳದಿಂದ ಸಿ.ಎನ್.ಭಾಸ್ಕರಪ್ಪ 1996ರಲ್ಲಿ ಒಮ್ಮೆ ಗೆದ್ದ ಉದಾಹರಣೆಯಿದೆ, 2004ರಲ್ಲಿ ಜೆಡಿಎಸ್‌ನಿಂದ ಸ್ಫರ್ಧಿಸಿದ್ದ ಡಿ.ಎಲ್.ಜಗಧೀಶ್ ಹಾಗೂ 2009ರಲ್ಲಿ ಎಸ್.ಪಿ.ಮುದ್ದಹನುಮೇಗೌಡ, 2019ರಲ್ಲಿ ಎಚ್.ಡಿ.ದೇವೇಗೌಡ ಎರಡನೇ ಸ್ಥಾನ ಪಡೆದಿರುವುದೇ ಜೆಡಿಎಸ್‌ನ್ನ ಸಾಧನೆ ಎನ್ನಿಸಿದೆ.