

ತುಮಕೂರು: ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೇ ಒಂದೇ ದಿನಕ್ಕೆ ಸಾರ್ವಜನಿಕರ ಮನೆ, ಅಂಗಡಿಗಳ ಮೇಲೆ ದಾಳಿ ನಡೆಸಿ ಸಂಪರ್ಕ ಕಡಿತಗೊಳಿಸುವ ಬೆಸ್ಕಾಂ ಸರ್ಕಾರದ ವಿವಿಧ ಇಲಾಖೆಗಳಿಂದ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿದೆ.
ತುಮಕೂರು ವಿಭಾಗ ವ್ಯಾಪ್ತಿಗೆ ಒಳಪಡುವ ತುಮಕೂರು ಮತ್ತು ಗುಬ್ಬಿ ತಾಲೂಕಿನ ಸರ್ಕಾರಿ ಇಲಾಖೆಗಳು ಆಗಸ್ಟ್-2023ರ ಅಂತ್ಯಕ್ಕೆ ಹೊಂದಿರುವ ಕಂದಾಯ ಬಾಕಿ ಉಳಿಸಿಕೊಂಡಿದ್ದು ವಾಪತಿಗೆ ಮನವಿ ಪತ್ರಿಕಾ ಪ್ರಕಟಣೆ ಮೊರೆಹೋಗಿದೆ.
ಬಾಕಿ ಇರುವ ಕಚೇರಿಗಳು ಕೂಡಲೇ ಹಣ ಪಾವತಿ ಮಾಡದೇ ಇದ್ದಲ್ಲಿ ವಿದ್ಯುತ್ ನಿಲುಗಡೆ ಮಾಡುವುದು ಅನಿವಾರ್ಯವಾಗಲಿದ್ದು ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ 17955.76ಲಕ್ಷ ರೂ., ಕಾವೇರಿ ನೀರಾವರಿ ನಿಗಮ-758 ಲಕ್ಷ ರೂ.ಗಳು, ನಗರಾಭಿವೃದ್ಧಿ ಇಲಾಖೆ 585 ಲಕ್ಷ ರೂ., ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ 71.72ಲಕ್ಷ ರೂ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ-46.00ಲಕ್ಷ ರೂ., ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ-13.26ಲಕ್ಷ ರೂ., ಗೃಹ ಇಲಾಖೆ-8.19ಲಕ್ಷ ರೂ., ಶಿಕ್ಷಣ ಇಲಾಖೆ 6.44ಲಕ್ಷ ರೂ., ಕಂದಾಯ ಇಲಾಖೆ-4.76ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆ-3.54ಲಕ್ಷ ರೂ.ಗಳು, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ-1.82ಲಕ್ಷ ರೂ., ಲೋಕೋಪಯೋಗಿ ಇಲಾಖೆ-1.58ಲಕ್ಷ ರೂ.ಗಳು ಬಾಕಿ ಉಳಿಸಿಕೊಂಡಿವೆ.