

ತುಮಕೂರು: ತೋಟದಲ್ಲಿ ತೆಂಗಿನ ಮರಗಳಿಗೆ ಗೊಬ್ಬರ ಹಾಕುತ್ತಿದ್ದ ರೈತನ ಕಾಲಿಗೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ ತುರುವೇಕೆರೆ ತಾಲೂಕಿನ ನಾಗಲಾಪುರದಲ್ಲಿ ಸಂಭವಿಸಿದೆ.
ನಾಗಲಾಪುರದ ರೈತ ಮಹೇಶ್(42) ಮೃತ. ತೋಟದಲ್ಲಿ ಆಕಸ್ಮಿಕವಾಗಿ ಹಾವು ಕಚ್ಚಿದ್ದರಿಂದ ಚೀರಾಡಿದ್ದಾರೆ, ಕೂಡಲೇ ಸ್ಥಳೀಯರು ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರಾದೂ ಚಿಕಿತ್ಸೆ ಫಲಕಾರಿಯಾಗಿ ಮೃತಪಟ್ಟಿದ್ದಾರೆ.
ಮೃತ ರೈತ ಮಹೇಶ್‌ಗೆ ಪತ್ನಿ, ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿದೆ.