ಉದಯನಿಧಿ ಹೇಳಿಕೆ ಬಗ್ಗೆ ಸಿಎಂ, ಡಿಸಿಎಂ ಅಭಿಪ್ರಾಯಕ್ಕೆ ರಾಜ್ಯದ ಜನರು ಕಾದಿದ್ದಾರೆ; ಕೆ.ಎಸ್.ಈಶ್ವರಪ್ಪ

07BGKSESHWARAPPAKALABURAGI.png
Published on

ತುಮಕೂರು: ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಮಗ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಬಗ್ಗೆ ನಮ್ಮ ರಾಜ್ಯ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು ಎಂದು ರಾಜ್ಯದ ಜನರು ಕಾಯುತ್ತಿದ್ದಾರೆ ಬಿಜೆಪಿ ಮುಖಂಡ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಲೇರಿಯಾ, ಡೆಂಘೆ ನಿರ್ನಾಮ ಮಾಡಿದಂತೆ ಸನಾತನ ಧರ್ಮ ನಿರ್ನಾಮವಾಗಬೇಕು ಎಂದು ಕರೆ ಕೊಟ್ಟಿರುವ ಉದಯನಿಧಿ ಒಬ್ಬ ಅಯೋಗ್ಯ ಸಚಿವ ಎಂದು ಜರಿದರು.

ಉದಯನಿಧಿ ಎಂಬ ವ್ಯಕ್ತಿ ಡಿಎಂಕೆ ಮಂತ್ರಿ ಮಂಡಲದಲ್ಲಿದ್ದಾನೆ ಎಂಬುದು ಈಗ ಗೊತ್ತಾಯಿತು, ಇವನೊಬ್ಬ ರಾಕ್ಷಸ ವಂಶದವನು ಎಂಬುದು ಜನರಿಗೆ ಪರಿಚಯವಾಗಿದೆ. ಈ ಬಗ್ಗೆ ಅವರ ಮಿತ್ರರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಿಲುವೇನು ಎಂದು ಪ್ರಶ್ನಿಸಿದರು.

ಸನಾತನ ಧರ್ಮವನ್ನು ನಾಶ ಮಾಡಲು ಉದಯನಿಧಿ ಅಲ್ಲ ಅವರಪ್ಪನ ಕೈಯಲ್ಲೂ ಆಗಲ್ಲ, ನೂರಾರು ವರ್ಷದಿಂದ ತಪ್ಪಸ್ಸು ಆಚರಿಸಿದ ಸಾಧು, ಸಂತರು ಬೆಳೆಸಿಕೊಂಡು ಬಂದ ಧರ್ಮ ನಮ್ಮದು ಎಂದರು.

ಸನಾತನ ಧರ್ಮದಿಂದಾಗಿ ಆಚಾರ ಸಂಸ್ಕಾರದಲ್ಲಿ ಪ್ರಪಂಚದಲ್ಲಿ ಭಾರತ ಮೊದಲ ಸ್ಥಾನದಲ್ಲಿ ನಿಲ್ಲುತ್ತೆ, ಚಂದ್ರಯಾನ 3ರ ಮೂಲಕ ವೈಜ್ಞಾನಿಕವಾಗಿಯೂ ಭಾರತ ಮೊದಲ ಸ್ಥಾನದಲ್ಲಿದೆ ಎಂದರು.


ಇಂಡಿಯಾ ಕೂಟಕ್ಕೆ ಪ್ರಿಯಾಂಕ ಖರ್ಗೆ ಹೋಗಲ್ಲ, ಸಿದ್ದರಾಮಯ್ಯ, ಡಿಸಿಎಂ ಹೋಗುತ್ತಾರೆ ಹಾಗಾಗಿ, ಉದಯನಿಧಿ ಹೇಳಿಗೆ ಬಗ್ಗೆ ಪ್ರಿಯಾಂಕ್‌ಖರ್ಗೆಯಂತಹ ಚಿಲ್ಲರೆಯವರ ಅಭಿಪ್ರಾಯ ನಾವು ಕೇಳುತ್ತಿಲ್ಲ, ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ದೇವಭಕ್ತರಾದ ರಾಜ್ಯದ ಸಿಎಂ ಹಾಗೂ ಡಿಸಿಎಂ ಅಭಿಪ್ರಾಯ ಕೇಳುತ್ತಿದ್ದೇವೆ.
ಕೆ.ಎಸ್.ಈಶ್ವರಪ್ಪ
ಬಿಜೆಪಿ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net