ಚಾಂಪಿಯನ್ ಡಾಬರ್‌ಮನ್, ಹಿಮಾಲಯನ್ ಬೆಕ್ಕು ಪ್ರಥಮ; ನಗರವಾಸಿಗಳ ಮನಗೆದ್ದ ಶ್ವಾನ, ಮಾರ್ಜಾಲ

dog1
Published on

ತುಮಕೂರು: ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಶ್ವಾನ ಹಾಗೂ ಬೆಕ್ಕುಗಳ ಪ್ರದರ್ಶನ ಗಮನ ಸೆಳೆದಿದೆ.

ಯೂನಸ್ ಖಾನ್ ಅವರ ಹಿಮಾಲಯನ್ ಬೆಕ್ಕು ಪ್ರಥಮ ಸ್ಥಾನದೊಂದಿಗೆ 5 ಸಾವಿರ ರೂ., ನಗದು ಜತೆಗೆ ಟ್ರೋಫಿ ಮುಡಿಗೇರಿಸಿಕೊಂಡಿತು. ಅರ್ಬಜ್ ಖಾನ್‌ರ ಪರ್ಸಿಯನ್ ಬೆಕ್ಕು ದ್ವಿತೀಯ ಸ್ಥಾನಗಳಿಸಿ 2500 ರೂ., ನಗದು, ಟ್ರೋಫಿ ಪಡೆಯಿತು.

ಶ್ವಾನಗಳಲ್ಲಿ ವಂಶಿ ಅವರ ಡಾಬರ್‌ಮನ್ ಚಾಂಪಿಯನ್‌ಶಿಪ್‌ನೊAದಿಗೆ 15 ಸಾವಿರ ರೂ., ನಗದು ಗೆದ್ದುಕೊಂಡಿತು. ದ್ವಿತೀಯ ಸ್ಥಾನ ಗೆದ್ದ ವೀರೇಶ್ ಅವರ ಮುಧೋಳ್ ಹುಂಡಾ 10 ಸಾವಿರ ನಗದು, ಟ್ರೋಫಿ ಪಡೆದರೆ, ಶಂಕರಪ್ಪರ ರಾಟ್‌ವಿಲ್ಲರ್ ತೃತೀಯ ಸ್ಥಾನಗಳಿಸಿ 5 ಸಾವಿರ ನಗದು ಟ್ರೋಫಿ ಪಡೆಯಿತು.

ಎಂ.ಎಸ್.ಸೋಮಶೇಖರ್ ಅವರ ಶಿಟ್ಸು ಸಮಾಧಾನಕರ ಬಹುಮಾನಕ್ಕೆ ಭಾಜನವಾಯಿತು.

ರಾಟ್‌ವಿಲ್ಲರ್, ಸೈಬಿರಿಯನ್ ಹಸ್ಕಿ, ಜರ್ಮನ್ ಶೆಪರ್ಡ್, ಬೀಗಲ್, ಗ್ರೇಟ್ ಡೇನ್ , ಶಿಟ್ಸು, ಜಾಕ್ ರಸೆಲ್ ಟೆರಿರ್, ಗೊಲ್ಡನ್ ರೆಟ್ರಿವರ್, ಡೊಗೊ ಅರ್ಜೆಂಟೀನಾ, ಬೆಲ್ಜಿಯನ್ ಮಲಿನೊಯಿಸ್, ಆಸ್ಟೆçÃಲಿಯನ್ ಶೆಪರ್ಡ್, ಲ್ಯಾಬ್ರಡಾರ್, ಅಮೆರಿಕನ್ ಬುಲ್ಲಿ , ಕಾಕರ್ ಸ್ಪೇನಿಯಲ್, ಡಚ್‌ಶಂಡ್, ಡಾಬರ್‌ಮೆನ್, ಫ್ರೆಂಚ್ ಬುಲ್ಲಡಾಂಗ್ ಹೀಗೆ ವಿದೇಶಿ ತಳಿ ಶ್ವಾನಗಳ ಪ್ರದರ್ಶನಲ್ಲಿ ಗಮನಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net