

ತುಮಕೂರು: ಶಿಕ್ಷಕರ ದಿನಾಚರಣೆ ಅಂಗವಾಗಿ 2023-24ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಜಿಲ್ಲಾ ಆಯ್ಕೆ ಸಮಿತಿಯು ಶಿಕ್ಷಕರನ್ನು ಆಯ್ಕೆ ಮಾಡಿದೆ.
ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸೆಪ್ಟೆಂಬರ್ 5ರಂದು ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಂಗಧಾಮಯ್ಯ ಸಿ. ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಚಿಕ್ಕನಾಯಕನಹಳ್ಳಿ ತಾಲೂಕುನ ಕಾರೇಹಳ್ಳಿಯ ಶಾಲೆ ಪಿ.ಕೆ.ರಾಜಣ್ಣ, ಗುಬ್ಬಿ ತಾಲೂಕು ದೊಡ್ಡಕಟ್ಟಿಗೇನಹಳ್ಳಿ ಶಾಲೆಯ ಎಸ್.ರಾಜು, ಕುಣಿಗಲ್ ತಾಲೂಕು ಮಡಿಕೆಹಳ್ಳಿಯ ಕೆ.ಸಿ.ನಾಗರಾಜಯ್ಯ, ತಿಪಟೂರು ತಾಲೂಕು ಕೊಡಗಿಹಳ್ಳಿಯ ಜಿ.ಮಂಜುಳ, ತುಮಕೂರು ತಾಲೂಕು ನರಸೀಪುರದ ಎ.ಸುಮಾ, ತುರುವೇಕೆರೆ ತಾಲೂಕು ನಾಯಕನಹಟ್ಟಿಯ ಟಿ.ಕೆಂಪರಾಜು ಅವರನ್ನು ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಚಿಕ್ಕನಾಯಕನಹಳ್ಳಿ ತಾಲೂಕು ತೀರ್ಥಪುರ ಶಾಲೆಯ ಕೆ.ಮಹೇಶ, ಗುಬ್ಬಿ ತಾಲೂಕು ಅಣ್ಣಪ್ಪನಹಳ್ಳಿಯ ಆರ್.ರಂಗಸ್ವಾಮಿ, ಕುಣಿಗಲ್ ತಾಲೂಕು ಅಮೃತೂರು ಶಾಲೆಯ ಎಂ.ಎಣ.ಮAಜಪ್ಪ, ತಿಪಟೂರು ತಾಲೂಕು ಭೋವಿಕಾಲೋನಿಯ ಎಂ.ಕೆ.ಶಶಿಕುಮಾರ್, ತುಮಕೂರು ತಾಲೂಕು ಅರೆಗುಜ್ಜನಹಳ್ಳಿಯ ಮುತ್ತುರಾಮಯ್ಯ, ತುರುವೇಕೆರೆ ತಾಲೂಕು ಗೋಣಿತುಮಕೂರಿನ ಟಿ.ಎಸ್.ನಸೀಮ್ಮುನ್ನೀಸಾ ಇವರನ್ನು ಆಯ್ಕೆ ಮಾಡಲಾಗಿದೆ.
ಪ್ರೌಢ ಶಾಲಾ ವಿಭಾಗ: ಚಿಕ್ಕನಾಯಕನಹಳ್ಳಿ ತಾಲೂಕು ಮತಿಘಟ್ಟದ ಶ್ರೀಜಯಭಾರತಿ ಪ್ರೌಢಶಾಲೆಯ ಎಂ.ಎಸ್.ಕವಿತಾ,
ಗುಬ್ಬಿ ತಾಲೂಕು ನೇರಳೇಕೆರೆಯ ಎಸ್.ಗಂಗರಾಜು, ಕುಣಿಗಲ್ ತಾಲೂಕು ತಾವರೇಕೆರೆಯ ಟಿ.ಎನ್.ಮಹದೇವಯ್ಯ, ತಿಪಟೂರು ತಾಲೂಕು ಹಳೇಪಾಳ್ಯ ಶಾಲೆಯ ಕೆ.ಸಿ.ಮಂಜುನಾಥ್, ತುಮಕೂರು ತಾಲೂಕು ಕಣಕಪ್ಪೆಯ ಎಂ.ಗೋವಿAದರಾಜು, ತುರುವೇಕೆರೆ ತಾಲೂಕು ಸಂಪಿಗೆಹೊಸಹಳ್ಳಿಯ ಕೆ.ಎಚ್.ಲತಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.