

ತುಮಕೂರು: ನಾಡಹಬ್ಬ ದಸರಾ ಅಂಗವಾಗಿ ಅಕ್ಟೋಬರ್ 23ರಂದು ತುಮಕೂರಿನಲ್ಲಿ 33ನೇ ವರ್ಷದ ದಸರಾ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ.
ಶಾಲಾ ಕಾಲೇಜು ವಿಭಾಗ ಮತ್ತು ಜನಪದ ನೃತ್ಯ ವಿಭಾಗ ಹಾಗೂ ಸಾಮಾನ್ಯ ವಿಭಾಗ ಎಂದು ಮೂರು ವಿಭಾಗದಲ್ಲಿ ಸ್ಫರ್ಧೆ ನಡೆಯಲಿದ್ದು ಭಾಗವಹಿಸುವವರು ದೇಶಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಪ್ರತಿನಿಧಿಸುವ ಎಲ್ಲಾ ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಬಹುದು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ಫರ್ಧೆಗಳು ನಡೆಯಲಿದದು ಅ.10 ನೋಂದಣಿಗೆ ಕೊನೆಯ ದಿನ, ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತಿದೆ.
ನೋಂದಣಿ ಹಾಗೂ ಮಾಹಿತಿಗೆ ಮೊ.8880882868, 9591915980, 9480091849, 9590933670 ಸಂಪರ್ಕಿಸಿ.