

ತುಮಕೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಮಾರ್ಚ್ 8ರಂದು ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿ ಹಲವಾರು ಮನರಂಜನಾ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಆಸಕ್ತ ಮಹಿಳಾ ಸ್ಪರ್ಧೆಗಳು ಮಾ. 8ರ ಬೆಳಿಗ್ಗೆ 9 ಗಂಟೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ವಿಜೇತರಿಗೆ ಪ್ರಥಮ, ದ್ವೀತಿಯ, ತೃತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ.
ಸ್ಪರ್ಧೆಯಲ್ಲಿ 13 ರಿಂದ 15 ವರ್ಫಿದೊಳಗಿನವರಿಗೆ ಮ್ಯೂಸಿಕಲ್ ಚೇರ್, 30 ರಿಂದ 40ವರ್ಷ-ಲೆಮನ್ ಅಂಡ್ ಸ್ಪೂನ್, 15 ರಿಂದ 30ವರ್ಷ- ಹಗ್ಗ-ಜಗ್ಗಾಟ, 40 ರಿಂದ 50ವರ್ಷ-ಸೂಜಿಗೆ ದಾರ ಪೋಣಿಸುವುದ.
50 ರಿಂದ 60 ವರ್ಷ-ಬಾಲ್ ಇನ್ ದ ಬಕೆಟ್ ಕ್ರೀಡೆಗಳು ನಡೆಯಲಿವೆ ಹಾಗೂ ಅಂತ್ಯಾಕ್ಷರಿ (ಚಲನಚಿತ್ರ ಗೀತೆ), ರಂಗೋಲಿ ಸ್ಪರ್ಧೆ, ಬಾಂಬ್ ಇನ್ ದ ಸಿಟಿ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಈ ಸ್ಪರ್ಧೆಗಳಿಗೆ ವಯೋಮಿತಿ ಇಲ್ಲ.