

ತುಮಕೂರು: ಮತ ಎಣಿಕಾ ಸಿಬ್ಬಂದಿ, ಎಣಿಕಾ ಏಜೆಂಟ್, ಅಭ್ಯರ್ಥಿಗಳು ಸೇರಿದಂತೆ ಯಾರಿಗೂ ಎಣಿಕಾ ಕೇಂದ್ರದೊಳಗೆ ಮೊಬೈಲ್ ತರಲು ಅವಕಾಶವಿರುವುದಿಲ್ಲ. ಮೊಬೈಲ್ ಸುರಕ್ಷಿತವಾಗಿಡಲು ಎಣಿಕಾ ಕೇಂದ್ರದ ಆವರಣದಲ್ಲಿ ಮೊಬೈಲ್ ಡೆಪಾಸಿಟ್ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.
ಎಣಿಕಾ ಕೇಂದ್ರದೊಳಗೆ ಬರುವ ಮುನ್ನ ತಮ್ಮ ಮೊಬೈಲ್‌ಗಳನ್ನು ಈ ಡೆಪಾಸಿಟ್ ಕೇಂದ್ರದಲ್ಲಿಡತಕ್ಕದ್ದು. ಮಹಿಳೆ ಹಾಗೂ ಪುರುಷರನ್ನು ತಪಾಸಣೆ ಮಾಡಲು ಪ್ರತ್ಯೇಕವಾಗಿ ಮಹಿಳಾ ಹಾಗೂ ಪುರುಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಎಣಿಕಾ ದಿನದಂದು ಭದ್ರತಾ ಕೊಠಡಿಯಿಂದ ಎಣಿಕಾ ಕೇಂದ್ರದೊಳಗೆ ವಿದ್ಯುನ್ಮಾನ ಮತ ಯಂತ್ರ ಸಾಗಿಸುವ ಪೂರ್ಣ ಪ್ರಕ್ರಿಯೆಯನ್ನು ನಿಗಾವಹಿಸಲು 360 ಡಿಗ್ರಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.
ಸಹಾಯಕ ಚುನಾವಣಾಧಿಕಾರಿಗಳು, ಎಣಿಕಾ ಸಹಾಯಕರು, ಸೂಕ್ಷö್ಮ ವೀಕ್ಷಕರು ಹಾಗೂ ಎಣಿಕಾ ಮೇಲ್ವಿಚಾರಕರಿಗೆ ಈಗಾಗಲೇ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಜೂನ್ 1ರಂದು 2ನೇ ಹಂತದ ಎಣಿಕಾ ತರಬೇತಿ ನೀಡಲಾಗುವುದು. ಜಿಲ್ಲೆಯಲ್ಲಿ 2 ಮತ ಎಣಿಕಾ ಕೇಂದ್ರಗಳಿರುವುದರಿAದ ಚುನಾವಣಾ ಆಯೋಗವು ಶಿಮ್ಮಿ ನಾಹಿದ್ ಹಾಗೂ ಕೆ.ಎಸ್.ವಾಸವ ಸೇರಿದಂತೆ ಇಬ್ಬರು ಎಣಿಕಾ ವೀಕ್ಷಕರನ್ನಾಗಿ ನೇಮಿಸಿದೆ.