

ತುಮಕೂರು: ನೀವು ಬರ ಅಧ್ಯಯನಕ್ಕೆ ಬಂದಿರುವ ದಿನವೇ ಮಳೆ ಬಂದಿದೆ, ನಿಮ್ಮ ಕಾಲ್ಗುಣದಿಂದಲೇ ಜಿಲ್ಲೆಯಲ್ಲಿ ಮಳೆಬಂದಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ರೈತರು ಹೊಗಳಿದರು.
ಮಧುಗಿರಿ ತಾಲೂಕು ಕೊಡ್ಲಾಪುರ ಗ್ರಾಮದದಲ್ಲಿ ಬರ ವೀಕ್ಷಣೆ ಸಂದರ್ಭದಲ್ಲಿ ರೈತರಾದ ವೆಂಕರಮಣಪ್ಪ ಹಾಗೂ ತಿಮ್ಮಪ್ಪ ಎಂಬವವರ ಹೊಲದಲ್ಲಿ ಮಳೆ ಇಲ್ಲದೆ ಒಣಗಿದ್ದ ಶೇಂಗಾ ವೀಕ್ಷಿಸಿದ ಬಿಎಸ್‌ವೈಗೆ ರೈತರು ಹೊಗಳಿದರು.
ನೀವು ಬರ್ತೀರಾ ಅನ್ನೋ ಸುದ್ದಿ ಹಬ್ಬುತ್ತಿದ್ದಂತೆ ಮಳೆ ಬಂತು, ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಮಳೆ ಬಂದಿದೆ. ದಯಮಾಡಿ ಕ್ಷೇತ್ರದೆಲ್ಲೆಡೆ ಓಡಾಡಿ ಮಳೆ ಬರುತ್ತೆ ಎಂದು ಮನವಿ ಮಾಡಿದರು.