

ತುಮಕೂರು: ರಾಜ್ಯ ಬಿಜೆಪಿ ವಕ್ತಾರರಾಗಿ ಜಿಲ್ಲೆಯ ಎಚ್.ಎನ್.ಚಂದ್ರಶೇಖರ್ ನೇಮಕಗೊಂಡಿದ್ದು ಜಿಲ್ಲಾ ಬಿಜೆಪಿ ಕಾರ್ಯಕರ್ತನನ್ನು ಗುರುತಿಸಿ ರಾಜ್ಯ ವಕ್ತಾರ ಸ್ಥಾನದಂತಹ ಮಹತ್ವದ ಹುದ್ದೆ ನೀಡಲಾಗಿದೆ.
2008ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರ್ಪಡೆಯಾದ ಚಂದ್ರಶೇಖರ್ ಹಂತ, ಹಂತವಾಗಿ ಮೇಲೇರಿದ್ದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಪಕ್ಷದ ಮಾಧ್ಯಮ ಪ್ರಮುಖ, ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಬಜರಂಗದಳದ ಜಿಲ್ಲಾ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಚಂದ್ರಶೇಖರ್ ಇದೀಗ ರಾಜ್ಯ ಬಿಜೆಪಿ ವಕ್ತಾರರಾಗಿ ನೇಮಕವಾಗಿದ್ದಾರೆ.
ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಚಂದ್ರಶೇಖರ್, ತುಮಕೂರು ತಾಲೂಕು ಹೊನಸಿಗೆರೆಯವರು. ಮಾಧ್ಯಮಗಳಲ್ಲಿ ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ.