

ನವೀಕರಿಸಲಾಗದ ಇಂಧನವನ್ನು ಮಿತವಾಗಿ ಬಳಸಿ; ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಲೋಕೇಶ್
ತುಮಕೂರು: ಇಂಧನದಲ್ಲಿ ಪ್ರಮುಖವಾಗಿರುವ ವಿದ್ಯುತ್ ಅತ್ಯಮೂಲ್ಯವಾದ ಸಂಪತ್ತು ಎನ್ನಿಸಿದ್ದು ಗ್ರಾಹಕರು ಜಾಗರೂಕತೆಯಿಂದ ಬಳಸಿ ಸಂರಕ್ಷಿಸಬೇಕು ಎಂದು ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಲೋಕೇಶ್ ಹೇಳಿದರು.
ನಗರದಲ್ಲಿ ಶನಿವಾರ ಬೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆ ವತಿಯಿಂದ ನಡೆದ `ಜಾಗೃತಿ ಅರಿವು ಸಪ್ತಾಹ'ದಲ್ಲಿ ಮಾತನಾಡಿದ ಅವರು, ಮಳೆ ಅಭಾವದ ನಡುವೆಯೂ ವಿದ್ಯುತ್ ಉತ್ಪಾದನೆ ಮಾಡಿ ಗ್ರಾಹಕರ ಮನೆ ಬಾಗಿಲಿಗೆ ಪೂರೈಸಲಾಗುತ್ತಿದೆ ಎಂದರು.
ಪ್ರತಿ ಯೂನಿಟ್ ಉತ್ಪಾದನೆಗೂ ಬಹಳ ಕಷ್ಟದ ಪರಿಸ್ಥಿತಿ ಇದೆ, ಇಂತಹ ವಿದ್ಯುತ್‌ನ್ನು ಗ್ರಾಹಕರು ಮನಬಂದAತೆ ಬಳಸದೆ ಅಗತ್ಯಕ್ಕೆ ತಕ್ಕಂತೆ ಬಳಬೇಕು ಎಂದು ಸಲಹೆ ನೀಡಿದರು.
ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲೂ ಪ್ರತಿ ಯೂನಿಟ್ ವಿದ್ಯುತ್ ಕೊಡಲಾಗುತ್ತಿದೆ. ಹೆಚ್ಚಿನ ಮಹತ್ವವನ್ನು ವಿದ್ಯುತ್‌ಗೆ ನೀಡಬೇಕು. ಒಂದು ಪ್ರಮುಖವಾದ ವಸ್ತುವಿಗೆ ಕೊಡುವಷ್ಟು ಬೆಲೆಯನ್ನು ವಿದ್ಯುತ್‌ಗೂ ಕೊಡಬೇಕು ಎಂದರು.
ಹೊಸದಾಗಿ ಮನೆ, ಲೇಔಟ್, ಕಟ್ಟಡ ನಿರ್ಮಾಣ ಮಾಡುವಾಗ ವೆಲ್ಡಿಂಗ್, ಗ್ರಾನೈಟ್ ಇನ್ನಿತರೆ ವಿದ್ಯುತ್ ಉಪಯೋಗಿಸುವಂತಹ ಕೆಲಸಗಳಿಗೆ ಬೆಸ್ಕಾಂನಿAದ ಅನುಮತಿ ಪಡೆಯಬೇಕು. ಜತೆಗೆ ಎಲ್‌ಟಿ 7 ಜಕಾತಿಯ ಮೀಟರ್ ಪಡೆಯಬೇಕು. ಹಳೆ ಮನೆಯ ಮೀಟರ್‌ಗೆ ಸಂಪರ್ಕ ಮಾಡಿಕೊಳ್ಳಬಾರದು ಎಂದರು.
ವಿದ್ಯುತ್ ಬಳಕೆ ಬಗ್ಗೆ ಗ್ರಾಹಕರಿಗೆ ಸಪ್ತಾಹ ಅವಧಿಯಲ್ಲಿ ಮಾತ್ರ ಜಾಗೃತಿ ಮೂಡಿಸುವುದಲ್ಲ, ನಿರಂತರವಾಗಿ ಜನರಲ್ಲಿ ವಿದ್ಯುತ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಬೆಸ್ಕಾಂ ಜಾಗೃತ ದಳದ ಇನ್ಸ್ಪೆಕ್ಟರ್ ಡಿ.ಜಿ.ಶ್ರೀನಿವಾಸ್ ಮಾತನಾಡಿ, ವಿದ್ಯುತ್ ಕಳ್ಳತನ ಮತ್ತು ದುರುಪಯೋಗ ಶಿಕ್ಷಾರ್ಹ ಮತ್ತು ದಂಡಾರ್ಹ ಅಪರಾಧವಾಗಿದೆ. ಬೆಸ್ಕಾಂ ಕಳ್ಳತನ ಮತ್ತು ದುರುಪಯೋಗ À ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರ ವಿವರ ಗೌಪ್ಯವಾಗಿಡಲಾಗುವುದು ಎಂದರು.
ವಿದ್ಯುತ್ ಸಂಬAಧಿಸಿದ ಯಾವುದೇ ವಿಚಾರಣೆಗಾಗಿ ಮತ್ತು ಮಾಹಿತಿಗಾಗಿ 1912 ಬೆಸ್ಕಾಂ ಸಹಾಯವಾಣಿ 24/7 ಕರ್ತವ್ಯ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಬೆಸ್ಕಾಂ ಮಿತ್ರ, ಬೆಸ್ಕಾಂ ಹೆಚ್.ಟಿ. ಗ್ರಾಹಕ ಮುಂತಾದ ಮೊಬೈಲ್ ಅಪ್ಲಿಕೇಷನ್ ಒದಗಿಸಲಾಗಿದೆ ಎಂದರು.
ಎಇಇ ಪ್ರಶಾಂತ್ ಕೂಡ್ಲಿಗಿ, ಬೆಸ್ಕಾಂ ಜಾಗೃತ ದಳದ ಪಿಎಸ್‌ಐ ರಂಗನಾಥ್, ಬೆಸ್ಕಾಂ ಎಇಇ ಗುರುರಾಜ್, ಕರಿಯಪ್ಪ, ವೆಂಕಟೇಶ್, ಮಲ್ಲಣ್ಣ ಮತ್ತಿತರರು ಇದ್ದರು.