

ತುಮಕೂರು: ನಗರದ ಹೊರವಲಯದಲ್ಲಿನ ಎಸ್ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಕಲ್ಲು ಮತ್ತು ಕಾಂಕ್ರೀಟ್ ಕೆಲಸ ಕುರಿತು 30 ದಿನಗಳ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ತರಬೇತಿ ನೀಡಲು ಅರ್ಹ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ತರಬೇತುದಾರರು ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ, ಪದವಿ ಪ್ರಮಾಣ ಪತ್ರ, ಕೆಲಸದ ಅನುಭವ ಪ್ರಮಾಣ ಪತ್ರದೊಂದಿಗೆ ಜುಲೈ 25ರೊಳಗಾಗಿ ಖುದ್ದು ಸಂಸ್ಥೆಯ ನಿರ್ದೇಶಕರನ್ನು ಭೇಟಿ ಮಾಡಬಹುದು.
ಮಾಹಿತಿಗಾಗಿ ನಿರ್ದೇಶಕ, ಎಸ್ಬಿಐ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸಿಂಗನಹಳ್ಳಿ ಕಾಲೋನಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ತುಮಕೂರು-. ಸಂಪರ್ಕಿಸಿ.