ಅಂಬಿಗರಿಂದ ಅರ್ಜಿ

application
Published on

ತುಮಕೂರು: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ವಿವಿಧ ಯೋಜನೆಯಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲು ಅಂಬಿಗರು, ಬೆಸ್ತರು, ಗಂಗಾಮತಸ್ಥರು ಹಾಗೂ ಅದರ ಉಪಜಾತಿಗೆ ಸೇರಿದವರಿಂದ ಸೇವಾಸಿಂಧು ಪೋರ್ಟಲ್​ ಮೂಲಕ ಅರ್ಜಿ ಆಹ್ವಾನಿಸಿದೆ.


ಆಸಕ್ತರು ಆ.31ರೊಳಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ನಿಗಮದ ವೆಬ್​ಸೈಟ್​https://ambigaradevelopment.karnataka.gov.in

ಅಥವಾ ನಿಗಮದ ದೂ.080- 22864099 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ.0816-2005008 ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ವಿ.ವೆಂಕಟರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net