ರಂಗೋಲಿ ಹಾಕಲು ಬಂದ ಮಹಿಳೆ ಆಯತಪ್ಪಿ ಬಿದ್ದು ಸಾವು

Hemavathi111
Published on

ತುಮಕೂರು: ಬೆಳಗ್ಗೆ ಮನೆಯ ಮುಂದೆ ರಂಗೋಲಿ ಹಾಕಲು ಬಂದ ಮಹಿಳೆ ಆಯತಪ್ಪಿ ಮಹಡಿಯಿಂದ ಕೆಳಗೆಬಿದ್ದು ಸ್ಥಳದಲ್ಲಿಯೇ ಮೃತರಾಗಿರುವ ಘಟನೆ ತಿಪಟೂರಿನ ಹಳೇಪಾಳ್ಯ ಕೆಂಚರಾಯನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ.

ನೇಕಾರ ವೃತ್ತಿ ಮಾಡುವ ದಯಾನಂದ್ ಎಂಬುವವರ ಪತ್ನಿ ಹೇಮಾವತಿ(40) ಮೃತೆ. ಶುಕ್ರವಾರ ಬೆಳಗ್ಗೆ ಆಯತಪ್ಪಿ ಒಂದನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದು, ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಹೇಮಾವತಿ ಪತಿ, 2 ಹೆಣ್ಣು, 1 ಗಂಡು ಮಗು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net