

ತುಮಕೂರು: ಆಟವಾಡುತ್ತಿದ್ದ 5 ವರ್ಷದ ಬಾಲಕ ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಿಪಟೂರು ತಾಲೂಕು ಲಿಂಗದಹಳ್ಳಿ ಕಾಲೋನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಜ್ಞಾನೇಶ್ವರ, ತಾಯಿ ದಂಪತಿ ಪುತ್ರ ದ್ರುವಂತ್(5) ಮೃತ ಬಾಲಕ. ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಬಾಲಕನ ತಂದೆ ಹಾಗೂ ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದು ಸಹೋದರಿ ನಿರ್ಮಿಸುತ್ತಿರುವ ಮನೆ ಸಹಾಯಕ್ಕೆಂದು ಲಿಂಗದಹಳ್ಳಿಗೆ ಬಂದಿದ್ದಾಗ ಘಟನೆ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ.