ಕೈಗಾರಿಕಾ ಪ್ರದೇಶಕ್ಕೆ ತುಮಕೂರು ನಗರಸಾರಿಗೆ ಸೌಲಭ್ಯ

20_PARAM
Published on

ತುಮಕೂರು: ಕೈಗಾರಿಕೆಗಳು ಹೆಚ್ಚಾಗಿರುವ ವಸಂತನರಸಾಪುರ ಹಾಗೂ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಂದು ನಗರಸಾರಿಗೆ ಸೌಲಭ್ಯ ನೀಡಲಾಗಿದೆ.

ನೂತನ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ತುಮಕೂರು-ವಸಂತನರಸಾಪುರ ಭಾನುವಾರ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು, ಉಪವಿಭಾಗಾಧಿಕಾರಿ ಗೌರವ್ ಕುಮಾರಶೆಟ್ಟಿ, ತಹಸೀಲ್ದಾರ್ ಸಿದ್ದೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net