ರೈತರಿಗೆ ಸ್ಪಂದಿಸುವ ಕಾಯಂ ಅಧಿಕಾರಿ ನೇಮಿಸಿ

ಮೈಸೂರು ರೇಷ್ಮೆ ಬಿತ್ತನೆ ವಲಯದ ಜಂಟಿ ನಿರ್ದೇಶಕಕರಿಗೆ ಬೆಳೆಗಾರರು ಮನವಿ
ಬಿಳಿದೇವಾಲಯ ರೇಷ್ಮೆ ಜಂಟಿ ನಿರ್ದೇಶಕ ಹಾಗೂ ಉಪ ನಿರ್ದೇಶಕರ ಕಚೇರಿ.
ಬಿಳಿದೇವಾಲಯ ರೇಷ್ಮೆ ಜಂಟಿ ನಿರ್ದೇಶಕ ಹಾಗೂ ಉಪ ನಿರ್ದೇಶಕರ ಕಚೇರಿ. ಬಿಳಿದೇವಾಲಯ ರೇಷ್ಮೆ ಜಂಟಿ ನಿರ್ದೇಶಕ ಹಾಗೂ ಉಪ ನಿರ್ದೇಶಕರ ಕಚೇರಿ.
Published on: 

ಕುಣಿಗಲ್: ​ಪಟ್ಟಣದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಕಾಯಂ ಮಾರುಕಟ್ಟೆ ಅಧಿಕಾರಿ ನೇಮಿಸಿ, ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ತಾಲೂಕಿನ 20ಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರು ಮೆಸೂರು ರೇಷ್ಮೆ ಬಿತ್ತನೆ ವಲಯದ ಜಂಟಿ ನಿರ್ದೇಶಕ ರಾಚಯ್ಯ ಹಾಗೂ ಉಪನಿರ್ದೇಶಕಿ ಆಶಾ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ರೇಷ್ಮೆ ಬೆಳೆಗಾರರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದೆ ಬೇಜಾವ್ಬಾರಿತನದಿಂದ ವರ್ತಿಸುತ್ತಿರುವುದರಿಂದ ಮೈಸೂರು ರೇಷ್ಮೆ ಬಿತ್ತನೆ ವಲಯ ಅವನತಿತ್ತ ಸಾಗಿದೆ. ಇದೇ ರೀತಿ ಅಧಿಕಾರಿಗಳ ರ್ನಿಲಕ್ಷ$್ಯ ಮುಂದುವರಿದರೆ ರೈತರು ತಮ್ಮ ಸಂಪ್ರದಾಯಕ ರೇಷ್ಮೆ ಬೆಳೆ ಬಿಟ್ಟು ಮಿಶ್ರ ತಳಿ ಬೆಳೆ ಬೆಳೆಯಲು ಮುಂದಾಗಬೇಕಾಗುತ್ತದೆ. ಇದನ್ನು ಅಧಿಕಾರಿಗಳು ಅರಿತುಕೊಂಡು ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾರೆ ಇಡೀ ಬಿತ್ತನೆ ವಲಯ ಮುಚ್ಚಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಾಲೂಕಿನ ಬೊಮ್ಮನದೊಡ್ಡಿ (ಬೊಮ್ಮಡಿಗೆರೆ) ರೇಷ್ಮೆ ಬೆಳೆಗಾರ ರಂಗಸ್ವಾಮಯ್ಯ ಅವರ ನೇತತ್ವದಲ್ಲಿ ರೆತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಖಡಕ್​ ಎಚ್ಚರಿಸಿದರು.

ರೇಷ್ಮೆ ಕೃಷಿ ೇತ್ರ ಹಾಗೂ ಪಿ&4 ಬಿತ್ತನೆ ಕೋಟಿಯಲ್ಲಿ ರೇಷ್ಮೆ ವಿಸ್ತರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಪ್ರಕಾಶ್​ ನಾರಾಯಣ ಎಂಬುವವರನ್ನು ಕುಣಿಗಲ್​ ರೇಷ್ಮೆ ಮಾರುಕಟ್ಟೆಗೆ ಒಒಡಿ ಮೂಲಕ ಮಾರುಕಟ್ಟೆ ಅಧಿಕಾರಿಯಾಗಿ ನಿಯೋಜನೆ ಮಾಡಲಾಗಿದೆ. ಇದೇ ಅಧಿಕಾರಿಯನ್ನು ಕುಣಿಗಲ್​ ಎಡಿಎಸ್​ ಕಚೇರಿಗೆ ರೇಷ್ಮೆ ಸಹಾಯಕ ನಿರ್ದೆಶಕ ಹುದ್ದೆಗೆ ಪ್ರಭಾರ ಆಗಿ, ರೇಷ್ಮೆ ಇಲಾಖೆಯ ನೌಕರರ ಸಂದ ಹೆಸರಿನಲ್ಲಿ ನಡೆಸುತ್ತಿರುವ ನ್ಯಾಯಬೆಲೆ ಅಂಗಡಿಯಲ್ಲಿ ವಿತರಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ರೆಷ್ಮೆ ಬೇಳೆಗಾರರ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಿಲ್ಲ. ರೈತರು ಮಾರುಕಟ್ಟೆಗೆ ತಂದ ಗೂಡುಗಳಿಗೆ ಸರಿಯಾದ ದರ ಸಿಗದೇ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ರೇಷ್ಮೆ ಮಾರುಕಟ್ಟೆಯಲ್ಲಿ ತೀರುಗಾಡಿ ಬರುವ ಈ ಅಧಿಕಾರಿಯಿಂದ ಪಿ4&ಬಿತ್ತನೆ ಕೋಟಿಯಲ್ಲಿ ಹುಳುಗಳಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಒಂದು ಬಾರಿ ಸೋಂಕು ಹರಡಿದರೆ ಇಡೀ ಬಿತ್ತನೆ ವಲಯ ಸಂಪೂರ್ಣ ನಾಶವಾಗುತ್ತದೆ. ಕೂಡಲೇ ಅಗತ್ಯ ಕ್ರಮಕೆಗೊಳ್ಳದಿದ್ದರೇ ರೇಷ್ಮೆ ಬೆಳೆಗಾರರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶೇ.90ರಿಂದ 20ಕ್ಕೆ ಕುಸಿತ:

ಬಿತ್ತನೆ ಗೂಡುಗಳನ್ನು ಉತಷ್ಟ ಗುಣಮಟ್ಟದಲ್ಲಿ ಬೆಳೆಯುತ್ತಿದ್ದೇವೆ. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ತಮ್ಮ ನೆಪುಣ್ಯತೆ, ಕೌಶಲದಿಂದ ಶೇ.90 ಗೂಡುಗಳನ್ನು ಬಿತ್ತನೆಗೆ ಮಾರಾಟ ಮಾಡಿಸುತ್ತಿದ್ದರಿಂದ ನಮಗೆ ಅನುಕೂಲವಾಗುತ್ತಿತ್ತು. ಅವರು ಹಣವನ್ನು ನಗದು ರೂಪದಲ್ಲಿ 2&3 ದಿನಗಳಲ್ಲಿ ಪಾವತಿಸುತ್ತಿದ್ದರು. ಹಾಗಾಗಿ ರೆತರು ಉತ್ಸಾಹದಿಂದ ಕೃಷಿ ಮಾಡುತ್ತಿದ್ದರು. ಆದರೆ ಅವರು ಆರು ತಿಂಗಳ ಹಿಂದೆ ನಿವೃತ್ತಿಯಾದ ನಂತರ ಯಾವುದೇ ಕಾಯಂ ಅಧಿಕಾರಿ ನೇಮಿಸಿಲ್ಲ. ನಾವು ಬೆಳೆದ ಗೂಡುಗಳು ಬಿತ್ತನೆಗೆ ಹೋಗದೆ ಕೇವಲ ಚರಕಕ್ಕೆ ಹೋಗುತ್ತಿವೆ. ಈ ಅಧಿಕಾರಿಯಿಂದ ನಮಗೆ ಸಮಸ್ಯೆಯಾಗಿದೆ. ಕೂಡಲೇ ಕುಣಿಗಲ್​ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಅನುಭವಿ ಹಾಗೂ ನುರಿತ ಕಾಯಂ ಮಾರುಕಟ್ಟೆ ಅಧಿಕಾರಿ ನೇಮಿಸಬೇಕೆಂದು ಒತ್ತಾಯಿಸಿದರು.

ರೇಷ್ಮೆ ಬೆಳೆಗಾರರಾದ ವಾಣಿಗೆರೆ ಲೋಕೇಶ್​, ಬಿ.ಎನ್​. ರಂಗಸ್ವಾಮಿ, ಶಿವಣ್ಣ, ಬಿ.ಎನ್​.ನಂಜೇಗೌಡ, ರಾಜಣ್ಣ, ಗಂಗಯ್ಯ, ಜಗದೀಶ್​, ನಾಗರಾಜು, ಕಷ್ಣಪ್ಪ, ವರದರಾಜು ಸೇರಿದಂತೆ 20ಕ್ಕೂ ಹೆಚ್ಚು ರೆತರು ಇದ್ದರು.

ಅಧಿಕಾರಿ ಜಯಪ್ರಕಾಶ್​ ನಾರಾಯಣ ಬಳಿ ರೇಷ್ಮೆ ಬೆಳೆಗಾರರು ಹಲವು ಬಾರಿ ತಮ್ಮ ಸಮಸ್ಯೆ ಹೇಳಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಆಯುಕ್ತರ ಸಭೆಯಲ್ಲಿ ದೂರು ನೀಡಬೇಕೆಂದು ನಿರ್ಧಾರ ಮಾಡಿದ್ದೇವು. ಆದರೆ ಸಭೆ ಎರಡು ಬಾರಿ ರದ್ದಾಗಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ನಮ್ಮ ಕಷ್ಟ ಕೇಳುವವರು ಯಾರು ಇಲ್ಲದಂತಾಗಿದೆ.

ರಂಗಸ್ವಾಮಯ್ಯ, ರೇಷ್ಮೆ ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net