

ಕುಣಿಗಲ್: ಕಾರ್ತಿಕ ಅಮವಾಸ್ಯೆ ಅಂಗವಾಗಿ ತಾಲೂಕಿನ ಎಡಿಯೂರು ಶ್ರೀಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಲಕ್ಷ ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾದರು.
ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾಧಿಗಳು ದೀಪಕ್ಕೆ ಎಣ್ಣೆ, ಬತ್ತಿ ಹಾಕಿ ದೀಪ ಹಚ್ಚುವ ಮೂಲಕ ಧನ್ಯತೆ ಮೆರೆದರು. ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಮೊರೆಯಿಟ್ಟರು.
ಪ್ರಖ್ಯಾತ ಗಾಯಕಿ ಎಸ್.ಜಾನಕಿ ಅವರು ಕೂಡ ಶ್ರೀಕ್ಷೇತ್ರ ಎಡಿಯೂರು, ತಪೋಕ್ಷೇತ್ರ ಕಗ್ಗೆರೆಗೆ ಭೇಟಿ ನೀಡಿ ಶ್ರೀಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಪಡೆದರು. ವಿವಿಧ ಮಠಾಧ್ಯಕ್ಷರು, ಅಧಿಕಾರಿಗಳು, ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಸಾಕ್ಷಿಯಾದರು.