

ತುಮಕೂರು: ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿಗಾಗಿ ಪ್ರಥಮ ಬಿ.ಎಸ್ಸಿ, ಬಿ.ಎಸ್ಸಿ ಎಲೆಕ್ಟಾçö್ರನಿಕ್ಸ್ ಅಂಡ್ ಕಮ್ಯುನಿಕೇಷನ್, ಬಿ.ಸಿ.ಎ ಹಾಗೂ ಬಿ.ಸಿ.ಎ ಡಾಟಾಸೈನ್ಸ್ ಮತ್ತು ಬಿ.ವೋಕ್ ಕೋರ್ಸ್ಗಳ ಪ್ರವೇಶಾತಿಗಾಗಿ ಮೊದಲ ಸುತ್ತಿನ ಕೌನ್ಸಿಲಿಂಗ್ ನಂತರ ಉಳಿದಿರುವ ಸೀಟುಗಳ ಎರಡನೇ ಸುತ್ತಿನ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಕಾಲೇಜಿನ ಜಾಲತಾಣ:www.ucst.ac.in ನಿಂದ ಡೌನ್‌ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆ ಲಗತ್ತಿಸಿ ಕಾಲೇಜಿನ ಕಚೇರಿಗೆ ಸಲ್ಲಿಸಬೇಕು. ಪ್ರವೇಶಾತಿ ಅರ್ಜಿಯು ಕಾಲೇಜಿನ ಜೆರಾಕ್ಸ್ ಸೆಂಟರ್‌ನಲ್ಲಿಯೂ ಸಹ ಲಭ್ಯವಿರುತ್ತದೆ.
ಎರಡನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆ ಜು.5ರಂದು ನಡೆಯಲಿದ್ದು, ಮೊದಲನೇ ಸುತ್ತಿನ ಕೌನ್ಸಿಲಿಂಗ್‌ಗೆ ಹಾಜರಾಗಿ ಸೀಟು ಸಿಗದೇ ಇರುವ ವಿದ್ಯಾರ್ಥಿಗಳು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಗತ್ಯ ಮೂಲ ದಾಖಲೆಗಳೊಂದಿಗೆ ಈ ಕೌನ್ಸಿಲಿಂಗ್ ಪ್ರಕ್ರಿಯೆಗೆ ಹಾಜರಾಗಬಹುದು.