ಪರೀಕ್ಷೆ ಯಾವುದೊ, ನೀಡಿದ ಪ್ರಶ್ನೆಪತ್ರಿಕೆ ಇನ್ಯಾವೊದೊ; ತುಮಕೂರು ವಿವಿ ಪರೀಕ್ಷಾ ಎಡವಟ್ಟು

13TMK_VV_Exam
Published on

ತುಮಕೂರು: ತುಮಕೂರು ವಿವಿ 4ನೇ ಸೆಮಿಸ್ಟರ್ ಐಚ್ಛಿಕ ಕನ್ನಡ ಸಾಹಿತ್ಯ ಮಂದಾರ ಭಾಗ-4ರ ಪ್ರಶ್ನೆಪತ್ರಿಕೆ ಪರೀಕ್ಷಾ ಕೊಠಡಿಯಲ್ಲಿ ಅದಲು ಬದಲಾಗಿ ನೀಡಿದ್ದರಿಂದ ವಿದ್ಯಾರ್ಥಿಗಳು ಪರದಾಡಿರುವ ಘಟನೆ ವರದಿಯಾಗಿದೆ.

ಐಚ್ಛಿಕ ಕನ್ನಡ ವಿಷಯದಲ್ಲಿ ನಾಲ್ಕು ಪತ್ರಿಕೆಗಳಿದ್ದು ಸೆ.20ರಂದು ನಡೆಯಬೇಕಿರುವ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೆ.13ರಂದೇ ವಿತರಣೆಯಾಗಿದ್ದು ವಿವಿ ಪರೀಕ್ಷಾ ಗುಣಮಟ್ಟದ ಮೇಲೆ ಅನುಮಾನ ಮೂಡಿಸುವಂತಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ವಾರದ ಮೊದಲೇ ಪ್ರಶ್ನೆಪತ್ರಿಕೆಗಳನ್ನು ಸರಬರಾಜು ಮಾಡಲಾಗುತ್ತಿದ್ದು ಇಂತಹ ಎಡವಟ್ಟುಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದ್ದು ವಿವಿ ಪರೀಕ್ಷಾಂಗ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net