

ತುಮಕೂರು: ತುಮಕೂರು ವಿವಿ ಪದವಿ ಮೊದಲ ವರ್ಷದ ಪ್ರಥಮ ಸೆಮಿಸ್ಟರ್ ಇತಿಹಾಸ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಉತ್ತರ ಪತ್ರಿಕೆ ನೀಡದ ನಗರದ ಸರ್ಕಾರಿ ಪದವಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳು ವಿವಿಗೆ ದೂರು ನೀಡಿದ್ದಾರೆ.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಮವಾರ ಎಸ್ಇಪಿ ಪ್ರಥಮ ಸೆಮಿಸ್ಟರ್ ಪರೀಕ್ಷೆ ಹಾಜಕಾರಿದ್ದು ಅವರಿಗೆ 80 ಅಂಕಗಳಿಗೆ ಉತ್ತರ ಬರೆಯಲು ಕೇವಲ 24 ಪುಟದ ಉತ್ತರ ಪತ್ರಿಕೆ ನೀಡಿರುವುದು ವಿವಾದಕ್ಕೀಡಾಗಿದೆ. 36 ಪುಟದ ಉತ್ತರ ಪತ್ರಿಕೆ ನೀಡಿದ್ದರೆ 80 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು ಸಾಕಾಗಲಿದೆ.
ಆದರೆ, ಇತಿಹಾಸ ವಿಷಯದ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಬರೋಬ್ಬರಿ 12 ಪುಟಗಳನ್ನು ಕಡಿಮೆ ಕೊಟ್ಟು ಹೆಚ್ಚುವರಿ ಪುಟಗಳನ್ನು ಬಯಸಿದವರಿಗೂ ನೀಡದೆ ಇಷ್ಟೇ ಪುಟದಲ್ಲಿ ಉತ್ತರ ಬರೆಯಬೇಕು ಎಂದು ಪರೀಾ ಮೇಲ್ವಿಚಾರಕರು ವಿದ್ಯಾರ್ಥಿಗಳ ಬಾಯಿಮುಚ್ಚಿಸಿರುವುದು ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಹಳೆಯ ಶಿಕ್ಷಣ ನೀತಿಯಂತೆ ಪದವಿ ವಿದ್ಯಾರ್ಥಿಗಳು 80 ಅಂಕಗಳಿಗೆ ಪರೀೆ ಬರೆಯಬೇಕಿದೆ, ಕಳೆದ ಒಂದು ವರ್ಷ ಮಾತ್ರ ಜಾರಿಯಾಗಿದ್ದ ನೂತನ ಶಿಕ್ಷಣ ನೀತಿಯಲ್ಲಿ 60 ಅಂಕಗಳಿಗೆ ಪರೀೆ ಇದ್ದಿದ್ದರಿಂದ ಅವರಿಗೆ 24 ಪುಟಗಳ ಉತ್ತರ ಪತ್ರಿಕೆ ನೀಡಲು ವಿವಿ ಪರೀಾಂಗ ವಿಭಾಗ ಸೂಚಿಸಿದೆ ಆದರೆ, ಎಸ್ಇಪಿ ಕಲಾ ವಿಭಾಗದ ವಿದ್ಯಾರ್ಥಿಗಳು 80 ಅಂಕದ ವಿವರಾಣಾತ್ಮಕ ಪ್ರಶ್ನೆಗಳಿಗೆ ಉತ್ತರ ನೀಡಲು ಕೇವಲ 24 ಪುಟಗಳನ್ನು ನೀಡದ ವಿವಿ ಪರೀಾ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಮೇಲ್ನೋಟಕ್ಕೆ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವುದು ದೃಢವಾಗಿದ್ದು ತಪ್ಪನ್ನು ಪರೀಾಂಗ ಮೇಲ್ವಿಚಾರಕರ ಮೇಲೆ ಹೊರಿಸಲಾಗುತ್ತಿದೆ. ಆಗಿರುವ ಅನ್ಯಾಯದ ಬಗ್ಗೆ ವಿದ್ಯಾರ್ಥಿಗಳು ದನಿ ಮಾಡಿದ ಕೂಡಲೇ ಕಾಲೇಜು ವಾಟ್ಸ್ ಆಪ್ ಗುಂಪಿನಲ್ಲಿ ಒಂದು ಬುಕ್ಲೆಟ್ ಮಾತ್ರ ನೀಡಲಾಗುತ್ತಿದ್ದು ಹೆಚ್ಚುವರಿ ಪುಟ ನೀಡಲು ಅವಕಾಶವಿಲ್ಲ ಒಂದು ಮೆಸೇಜ್ ಹಾಕಿ ಸುಮ್ಮನಾಗಿದ್ದಾರೆ ಆದರೆ, ಹೆಚ್ಚು ಅಂಕ ಪಡೆದು ರ್ಯಾಂಕ್ ಪಡೆಯುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲಾಗದೆ ಅನ್ಯಾಯಕ್ಕೀಡಾಗಿದ್ದಾರೆ.
ತುಮಕೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ 24 ಪುಟಗಳ ಉತ್ತರ ಪತ್ರಿಕೆ ನೀಡಲಾಗಿದೆ ಎಂದು ದೂರು ಬಂದಿದೆ, ಎಸ್ಇಪಿ ವಿದ್ಯಾರ್ಥಿಗಳಿಗೆ 36 ಪುಟಗಳ ಉತ್ತರ ಪತ್ರಿಕೆ ನೀಡುವಂತೆ ವಿವಿ ವತಿಯಿಂದ ನಿರ್ದೇಶನ ನೀಡಿದ್ದರೂ ಪರೀಾ ಮೀಲ್ವಿಚಾರಕರು ತಪು$್ಪ ಮಾಡಿದ್ದಾರೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ. ಮಂಗಳವಾರ ಖುದ್ದು ಕಾಲೇಜಿಗೆ ನಾನೇ ಭೇಟಿ ನೀಡಿ ತನಿಖೆ ನಡೆಸುತ್ತೇನೆ. ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳುತ್ತೇವೆ. ಪ್ರೊ.ಕೆ.ಪ್ರಸನ್ನಕುಮಾರ್ ಕುಲಸಚಿವ(ಪರಿಕ್ಷಾಂಗ ವಿಭಾಗ)