ಸಾವರ್ಕರ್ ಅಧ್ಯಯನ ಪೀಠಕ್ಕೆ ಸಿಎಂ ಬೊಮ್ಮಾಯಿ ಸಹಕಾರ

cM_CM_
Published on

ತುಮಕೂರು: ತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಯಾದರೆ ಸರ್ಕಾರ ಅಗತ್ಯ ಸಹಕಾರ ನೀಡುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.


ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ವಿವಿ ಸಿಂಡಿಕೇಟ್ ಆಂತರಿಕ ವಿಷಯವಾಗಿದ್ದು ಅವರೆಲ್ಲಾ ಒಪ್ಪಿ ಸರ್ಕಾರಕ್ಕೆ ಕಳುಹಿಸಿದರೆ ಖಂಡಿತ ಪೀಠ ಆರಂಭವಾಗಲಿದೆ ಎಂದರು.


ಸರ್ಕಾರ ಹಾಗೂ ರಾಜಕೀಯ ಒತ್ತಡದಿಂದ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ, ವಿವಿ ಸಿಂಡಿಕೇಟ್, ಅಕಾಡಮಿಕ್ ಕೌನ್ಸಿಲ್ ತೀರ್ಮಾನವಷ್ಟೇ, ಈ ಹಿಂದೆ ಸ್ಥಾಪನೆಯಾಗಿರುವ ಪೀಠಗಳಿಗೆ ಇವರು ಎಷ್ಟು ಒತ್ತಡ ತಂದಿದ್ದರು ಎಂದು ಕಾಲೆಳೆದರು.


ಒಂದೊಂದು ಸರ್ಕಾರವಿದ್ದಾಗ ಒಂದೊಂದ ಕಾಲದಲ್ಲಿ ಒಂದೊಂದು ಅಧ್ಯಯನ ಪೀಠ, ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿದ್ದಾರೆ ಅವೆಲ್ಲಾ ಆಗಿನ ಕಾಲದ ಒತ್ತಡ ಅಷ್ಟೇ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net