ವಿಆರ್​ಡಬ್ಲ್ಯೂ ಹುದ್ದೆಗೆ ಅರ್ಜಿ

Application
Published on

ತುಮಕೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ(ವಿಆರ್​ಡಬ್ಲ್ಯೂ)ರ ತಾತ್ಕಾಲಿಕ ಹುದ್ದೆಗಳನ್ನು ಗೌರವಧನ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗುಬ್ಬಿ ತಾಲೂಕಿನ ಎಸ್​.ಕೊಡಗೀಹಳ್ಳಿ ಹಾಗೂ ಚಂಗಾವಿ ಗ್ರಾಪಂ, ಕುಣಿಗಲ್​ ತಾಲೂಕಿನ ಕಗ್ಗೆರೆ, ಪಾವಗಡ ತಾಲೂಕಿನ ಪಳವಳ್ಳಿ ಹಾಗೂ ಕನ್ನಮೇಡಿ, ತಿಪಟೂರು ತಾಲೂಕಿನ ಮಣಕಿಕೆರೆ ಗ್ರಾಪಂಗಳಲ್ಲಿ ಖಾಲಿಯಿದ್ದು, ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿ ಜೂ.23ರೊಳಗಾಗಿ ಸಂಬಂಧಿಸಿದ ತಾಲೂಕು ಪಂಚಾಯತಿಗಳಿಗೆ ಸಲ್ಲಿಸಬಹುದು.

ಆಯ್ಕೆಯಾದವರಿಗೆ ಮಾಸಿಕ 10000 ರೂ. ಗೌರವಧನ ನೀಡಲಾಗುವುದು. ವಿಆರ್​ಡಬ್ಲ್ಯೂ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್​ಎಸ್​ಎಲ್​ಸಿ ಉತ್ತೀರ್ಣರಾಗಿದ್ದು, ಶೇ.40 ಮೇಲ್ಪಟ್ಟು ಭಾಗಶ@ ವಿಕಲತೆ ಹೊಂದಿ(ತೀವ್ರತರರಲ್ಲದ)ರುವ 18 ರಿಂದ 45ವರ್ಷ ವಯೋಮಿತಿಯೊಳಗಿನವರಾಗಿರಬೇಕು ಹಾಗೂ ಹುದ್ದೆ ಖಾಲಿಯಿರುವ ಗ್ರಾಪಂ ವ್ಯಾಪ್ತಿಯಲ್ಲಿಯೇ ವಾಸವಿರಬೇಕು. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಮಾಹಿತಿಗೆ ದೂ.0816 -2252763 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net