ಮತಗಟ್ಟೆಗೆ ಸುಳಿಯದ ಜಿಲ್ಲೆಯ 3.71ಲಕ್ಷ ಮತದಾರರು

10mdk01
Published on

ತುಮಕೂರು: ಜಿಲ್ಲೆಯಲ್ಲಿ ದಾಖಲೆಯ ಶೇ.83.45 ರಷ್ಟು ಮತದಾನವಾಗಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿ ತುಮಕೂರು ವಿವಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕೇಂದ್ರದ ಸ್ಟಾçಂಗ್ ರೂಂ ಸೇರಿವೆ.

ಜಿಲ್ಲೆಯಾದ್ಯಂತ 1120698 ಪುರುಷ ಮತದಾರರ ಪೈಕಿ 948819 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 1127126 ಮಹಿಳಾ ಮತದಾರರ ಪೈಕಿ 927095 ಮಹಿಳಾ ಮತದಾರರು ಮತ ಚಲಾಯಿಸಿರುತ್ತಾರೆ. ಇತರೆ 108 ಮತದಾರರ ಪೈಕಿ 20 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.

ಒಟ್ಟು 2247932 ಮತದಾರರ ಪೈಕಿ 1875934 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 83.45ಮತದಾನವಾಗಿದೆ. ಜಿಲ್ಲೆಯಲ್ಲಿ ಇನ್ನೂ 371998 ಮತದಾರರು ಮತಗಟ್ಟೆಗೆ ಸುಳಿಯರಿದಿರುವುದು ಬೇಸರ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net