

ತುಮಕೂರು : ಜಿಲ್ಲೆಯ ವಿವಿಧ ಯೋಜನೆಗಳಲ್ಲಿ ಅನುಷ್ಠಾನಗೊಂಡಿರುವ ಜಲಸಂಪನ್ಮೂಲ ಕಾಮಗಾರಿಗಳನ್ನು ವೀಕ್ಷಿಸಲು ಕೇಂದ್ರ ಜಲ ಶಕ್ತಿ ತಂಡ ಆಗಮಿಸಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಸ್ವಾಗತಿಸಿದರು.
ಕೇಂದ್ರ ಜಲ ಶಕ್ತಿ ತಂಡದಲ್ಲಿದ್ದ ಅಮಿತ್ ಕುಮಾರ್ ಅಗರ್ವಾಲ್ ಮತ್ತು ಸುಚೇತನ ವಿಶ್ವಾಸ್ ರವರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾತ್ಮ ಗಾಂಧಿ ನರೇಗಾ ಯೋಜನೆ, ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆಗಳಲ್ಲಿ ಕೈಗೊಂಡಿರುವ ಜಲಸಂಪನ್ಮೂಲ ಕಾಮಗಾರಿಗಳ ಬಗ್ಗೆ, ಇಲಾಖೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಕಾಮಗಾರಿಗಳ ಬಗ್ಗೆ ಪ್ರೆಸೆಂಟೇಷನ್ ನೀಡಲಾಯಿತು.
ತುಮಕೂರು ತಾಲ್ಲೂಕಿನ ಅರೆಯೂರು, ನಾಗವಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಜಲಸಂಪನ್ಮೂಲ ಕಾಮಗಾರಿಗಳನ್ನು ವೀಕ್ಷಿಸಲಾಯಿತು. ಕುಣಿಗಲ್ ತಾಲೂಕಿಗೆ ಭೇಟಿ ನೀಡಿ ಕೊಪ್ಪ, ಯಡಿಯೂರು, ಸಂತೆ ಮಾವತ್ತೂರು, ಮಾರ್ಕೋನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಂಡಿರುವ ನರ್ಸರಿ ಕಾಮಗಾರಿಗಳು, ಗೋಕಟ್ಟೆ, ಸಮುದಾಯ ಕೃಷಿ ಹೊಂಡ, ಬಹು ಕಮಾನು ತಡೆಗೋಡೆ, ಮಿಷನ್ 500 ಅಭಿಯಾನದಡಿ ಅನುಷ್ಠಾನಗೊಂಡಿರುವ ಅಮೃತ ಸರೋವರ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.