

ತುಮಕೂರು: ಯಾವುದೇ ಪರೀಕ್ಷೆಗಳನ್ನು ಎದುರಿಸುವಲ್ಲಿ ಆತ್ಮವಿಶ್ವಾಸ ಬಹುಮುಖ್ಯವಾಗಿದೆ. ಸಿದ್ಧತೆ ಸಮರ್ಪಕವಾಗಿದ್ದಲ್ಲಿ ರ‍್ಯಾಂಕಿAಗ್ ಪಡೆಯುವುದು ಎಲ್ಲರಿಗೂ ಸಾಧ್ಯ ಎಂದು ವಿದ್ಯಾವಾಹಿನಿ ಸಮೂಹಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಪ್ರಿಯಾ ಪ್ರದೀಪ್ ಹೇಳಿದರು.
ನಗರದ ವಿದ್ಯಾನಿಧಿ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ನೇವಿಗೇಟ್ ಟು ಎಕ್ಸೆಲೆನ್ಸ್- ಜೆಇಇ, ನೀಟ್ ಪರೀಕ್ಷೆಗಳಿಗೆ ಪೂರಕ ಸಿದ್ಧತೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಐಡಿ ಇಂಡಿಯಾದ ಸಂಸ್ಥಾಪಕ ಕಾರ್ಯದರ್ಶಿ ಡಾ. ಬಾಲಾಜಿ ಸಂಪತ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದೆಂದರೆ ಮ್ಯಾರಥಾನ್ ಓಟದಂತೆ, ಮೊದಲಿನಿಂದ ಕೊನೆಯವರೆಗೂ ಒಂದೇ ಬಗೆಯ ಕ್ಷಮತೆಯನ್ನು ಉಳಿಸಿಕೊಳ್ಳುವವನು ಮಾತ್ರ ಗುರಿ ತಲುಪುವುದು ಸಾಧ್ಯವಾಗುತ್ತದೆ ಎಂದರು.
ಪ್ರಾಚಾರ್ಯ ಸಿದ್ಧೇಶ್ವರಸ್ವಾಮಿ, ಉಪನ್ಯಾಸಕಿ ಎಂ.ಎಸ್.ಹೇಮಲತಾ, ದೀಪಾ ಮತ್ತಿತರರು ಇದ್ದರು.