

ತುಮಕೂರು: ಮಕ್ಕಳ ಕ್ರಿಯಾಶೀಲತೆ ಹಚ್ಚಿದಷ್ಟೂ ಅವರು ಸಮರ್ಥವಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಜತೆಗೆ ಯಶಸ್ಸು ಕಾಣುತ್ತಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಪ್ರಿಯಾ ಪ್ರದೀಪ್ ಹೇಳಿದರು.
ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿ-ಚಾಲೆಂರ‍್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಅವಕಾಶ ಹೊಸ ಕಲಿಕೆಯಾಗಿರುತ್ತದೆ, ವಿದ್ಯಾರ್ಥಿಗಳು ಆತ್ಮವಿಶ್ವಾಸದ ಮೂಲಕ ಮುಂದಿನ ಹಂತಗಳನ್ನು ಎದುರಿಸುತ್ತಾರೆ ಎಂದರು.
ವಿದ್ಯಾರ್ಥಿಗಳಾಗಿ ನಾವು ಸವಾಲುಗಳನ್ನು ಎದುರಿಸುತ್ತೇವೆ. ಹಾಗಾಗಿ ನಮ್ಮ ಕಾರ್ಯಕ್ರಮವು ವಿ-ಚಾಲೆಂರ‍್ರ್ಸ್ ಎಂದು ವಿದ್ಯಾರ್ಥಿ ಪ್ರತಿನಿಧಿ ಶ್ರವಣ್ ಹೇಳಿದರು.
ಆರ್ಮ್ ರೆಸ್ಲಿಂಗ್, ಕರಾಟೆ ಪ್ರದರ್ಶನ, ನೃತ್ಯ, ಸಮೂಹ ಗಾಯನ ಕಾರ್ಯಕ್ರಮ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಕಾರ್ಯಕ್ರಮದ ಮಾರ್ಗದರ್ಶಕರಾಗಿ ವಾಣಿಜ್ಯ ವಿಭಾಗದ ಸಾಧನಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕಿಷನ್ ಪ್ರಾರ್ಥಿಸಿದರು, ಸ್ಕಂದ ಸ್ವಾಗತಿಸಿದರು, ಯುವರಾಜ್ ವಂದಿಸಿದರು. ಶ್ರವಣ್ ಮತ್ತು ಭರತ್ ಕಾರ್ಯಕ್ರಮ ನಿರ್ವಹಿಸಿದರು.