ವಾರ್ತಾ ಇಲಾಖೆ ಮಮತಾ ವಿಧಿವಶ

MM
Published on

ತುಮಕೂರು: ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಂ.ಆರ್.ಮಮತಾ ( 47) ಅವರು ಇಂದು ನಿಧನರಾಗಿದ್ದಾರೆ.

ಕಳೆದ ಎರಡು ತಿಂಗಳಿನಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಮಮತಾ ಪ್ರಸಕ್ತ ತುಮಕೂರು ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತಿ‌ ಹಿರಿಯ ಪತ್ರಕರ್ತ ಎಚ್.ಆರ್.ರವೀಶ್​ , ಮಗ ಪ್ರಜ್ವಲ್ ಹಾಗೂ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.

ಮೃತದೇಹದ ಅಂತ್ಯಕ್ರಿಯೆ ತುಮಕೂರು ತಾಲೂಕು ಹಾಲನೂರು ಗ್ರಾಮದ ತೋಟದಲ್ಲಿ ಆ.3 ಶನಿವಾರ ಮಧ್ಯಾಹ್ನ 12ಕ್ನೆಕೆ ನೆರವೇರಲಿದೆ. ಬೆಂಗಳೂರಿನ ಅವರ ಮನೆಯಲ್ಲಿ ಶುಕ್ರವಾರ ಸಂಜೆ 8ರಿಂದ ಶನಿವಾರ ಬೆಳಗ್ಗೆ 8ರ ವರೆಗೂ ಅಂತಿಮ ದರ್ಶನಕ್ಕೆ ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net