

ತುಮಕೂರು: ನಗರದ 4 ಕೇಂದ್ರಗಳಲ್ಲಿ ಮೇ.31ರಂದು ಡಿಸಿಇಟಿ, ಪಿಜಿ ಸಿಇಟಿ, ಸಮಾಜ ಕಲ್ಯಾಣ ಇಲಾಖೆ ಕೆಎಎಸ್ ಉಚಿತ ತರಬೇತಿ ಪರೀಕ್ಷೆ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಒಟ್ಟು 2160 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇಂಜಿನಿಯರಿಂಗ್ ಕೋರ್ಸ್ಗಳಿಗೆ ಲ್ಯಾಟರಲ್ ಪ್ರವೇಶಕ್ಕಾಗಿ ನಗರದ ಬಿ.ಹೆಚ್. ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಅಶೋಕರಸ್ತೆಯಲ್ಲಿರುವ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಡಿಸಿಇಟಿ ಪರೀಕ್ಷೆ ಇಂದು ಮಧ್ಯಾಹ್ನ 2 ರಿಂದ 5ರ ವರೆಗೆ ನಡೆಯಲಿದ್ದು, 1462 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಎಂಇ, ಎಂಟೆಕ್ ಕೋರ್ಸ್ಗಳ ಪ್ರವೇಶಕ್ಕಾಗಿ ನಗರದ ಶ್ರೀಸಿದ್ಧಗಂಗಾ ಪಿಯು ಕಾಲೇಜಿನಲ್ಲಿ ಪಿಜಿಸಿಇಟಿ ಪರೀಕ್ಷೆ ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ನಡೆಯಲಿದ್ದು, 209 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ನಗರದ ಬಿ.ಹೆಚ್. ರಸ್ತೆಯ ಶ್ರೀ ಸಿದ್ಧಗಂಗಾ ಮಹಿಳೆಯರ ಪಿಯು ಕಾಲೇಜಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಕೆಎಎಸ್ ಉಚಿತ ತರಬೇತಿ ಪರೀಕ್ಷೆಯು ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ನಡೆಯಲಿದ್ದು, 489 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.