

ತುಮಕೂರು: ಜಿಲ್ಲಾಡಳಿತದ ವತಿಯಿಂದ ಆಚರಿಸುವ ತುಮಕೂರು ದಸರಾ-2025ರ ಅಂಗವಾಗಿ ಸೆಪ್ಟೆಂಬರ್ 27ರಂದು ಹಮ್ಮಿಕೊಂಡಿರುವ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದಡಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ.
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ(ಚುಕ್ಕಿ ಮತ್ತು ಎಳೆ ರಂಗೋಲಿ), ಲೆಮನ್ ಅಂಡ್ ಸ್ಪೂನ್, ಲೆಗ್ ಟೈಡ್ ರೇಸ್, ಮ್ಯೂಸಿಕಲ್ ಛೇರ್, ಹಗ್ಗ-ಜಗ್ಗಾಟ, ತಾಯಿ ಮತ್ತು ಮಗುವಿನ(6 ವರ್ಷದವರೆಗೆ) ಸಾಂಪ್ರದಾಯಿಕ ಉಡುಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ.
ಸೆಪ್ಟೆಂಬರ್ 27ರಂದು ಹಮ್ಮಿಕೊಂಡಿರುವ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದಡಿ ಮಹಿಳೆಯರಿಗಾಗಿ ಬೈಕ್ ರೈಡ್ ಸ್ಪರ್ಧೆ ಏರ್ಪಡಿಸಲಾಗಿದೆ.