ಸಿರಿಸಂಪತ್ತು ಸಮೃದ್ಧಿಗಾಗಿ ವರಮಹಾಲಕ್ಷ್ಮೀ ಬೇಡಿಕೊಳ್ಳಲು ಸಿದ್ಧತೆ

ttttttttttttttt
Published on

ತುಮಕೂರು: ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆಯಲ್ಲಿ ನಗರದ ಹೂ, ಹಣ್ಣ ಮಾರುಕಟ್ಟೆಯಲ್ಲಿ ಗುರುವಾರ ಜನಜಂಗುಳಿಯಿಂದ ಕೂಡಿತ್ತು.

ಸಿರಿಸಂಪತ್ತು ಸಮೃದ್ಧಿಗಾಗಿ ವರಮಹಾಲಕ್ಷ್ಮೀ ಬೇಡಿಕೊಳ್ಳಲು ಸಿದ್ಧತೆ ನಡೆಸಿರುವ ಜನರಿಗೆ ಪ್ರತೀ ವರ್ಷದಂತೆ ಹೂ, ಹಣ್ಣುಗಳ ಬೆಲೆ ಏರಿಕೆ ಬಿಸಿ ತಟ್ಟಿದೆ. ಆದರೂ, ಹಬ್ಬದ ಸಂಭ್ರಮವೇನು ಕಡಿಮೆ ಆಗಿರಲಿಲ್ಲ.

ಅಂತರಸಹಳ್ಳಿ ಹೂ, ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ವಿವಿಧ ಕಡೆಯಿಂದ ಹೂ ಬರುತ್ತಿದ್ದಂತೆ ಸಣ್ಣಪುಟ್ಟ ವ್ಯಾಪಾರಿಗಳು ಹಾಗು ಹಬ್ಬಕ್ಕೆ ಹೂ ಕೊಂಡುಕೊಳ್ಳುವರು ಮುಗಿಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net