

ಹುತ್ರಿದುರ್ಗ: ಕುಣಿಗಲ್ ತಾಲ್ಲೂಕಿನ ಐತಿಹಾಸಿಕ ಪ್ರವಾಸಿತಾಣ ಹುತ್ರಿದುರ್ಗ ಬೆಟ್ಟದ ತಪ್ಪಲಲ್ಲಿ ಇರುವ ಕಣಿವೆಪಾಳ್ಯ ಗ್ರಾಮದ ಬಳಿ ಕಳೆದೊಂದು ವಾರದಹಿಂದೆ ನಡೆದಿದ್ದ ವಾಮಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಹೋರ ಬಿದ್ದಿದೆ.
ಬೆಂಗಳೂರಿನ ಅಣ್ಣಮ್ಮ ದೇವಾಲಯದ ಅರ್ಚಕ ಹಾಗೂ ಅವರ ಕುಟುಂಬಸ್ಥರ ಪೋಟೊ ಬಳಸಿ ವಾಮಾಚಾರ ಮಾಡಿರುವುದು ಇಗ ಬಳಕಿಗೆ ಬಂದಿದೆ. ಅಣ್ಣಮ್ಮ ದೇವಾಲಯದ ಅರ್ಚಕರು ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅತಂಕಕ್ಕೆ ಒಳಗಾಗಿದ್ದಾರೆ.
ವಾಮಾಚಾರ ನಡೆದಿರುವ ಸ್ಥಳದಲ್ಲಿ ಪತ್ತೆಯಾಗಿರುವ ಪೋಟೊಗಳು ನಮ್ಮ ಕುಟುಂಬಸ್ಥರದ್ದು ಎಂದು ಧೃಡಪಡಿಸಿದ್ದು ಯಾರೊ ಕೀಡಿಗೇಡಿಗಳು ಈ ರೀತಿಯ ದೃಷೃತ್ಯ ಎಸಗಿದ್ದು ನಮ್ಮ ಕುಟುಂಬದವರಿಗೆ ಕೆಡುಕಾಗಲಿ ಎಂದು ಭಯ ಪಡಿಸುವ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ ಕುಟುಂಬದವರ ಪೋಟೊಗಳನ್ನು ಬಳಸಿಕೊಂಡು ಈ ಕೃತ್ಯ ಎಸಗಿರುವವರ ಮೇಲೆ ಕಾನೂನು ಕ್ರಮಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಾಮಾಚಾರ ಘಟನೆಯ ಬಗ್ಗೆ ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದು ಕಳೆದೊಂದು ವರ್ಷದ ಹಿಂದಷ್ಟೆ ಹುತ್ರಿದುರ್ಗ ಬೆಟ್ಟದಲ್ಲಿ ಚಾರಣಕ್ಕೆ ಬಂದ ಮಹಿಳೆಯನ್ನು ನಗ್ನಗೋಳಿಸಿ ಸುಲಿಗೆ ಮಾಡಲಾಗಿತ್ತು.
ಹುತ್ರಿಬೆಟ್ಟದ ತಪ್ಪಲಿನಲ್ಲಿರುವ ನಿರ್ಮಾಣ ಹಂತದ ಶ್ರೀ ಮುತ್ತುರಾಯಸ್ವಾಮಿ ದೇವಾಲಯದ ಮುಂಭಾಗ ವಾಮಾಚಾರ ಮಾಡಿರುವುದು ಸ್ಥಳಿಯರ ಆತಂಕಕ್ಕೆ ಕಾರಣವಾಗಿದೆ ಐತಿಹಾಸಿಕ ಪ್ರವಾಸಿತಾಣದ ಬಳಿ ಈ ರೀತಿಯ ಅಹಿತಕರ ಘಟನೆಗಳು ಮರುಕಳುಸುತ್ತಿವೆ.