

ತುಮಕೂರು: ತುರುವೇಕೆರೆ ತಾಲೂಕು ಮಲ್ಲಾಘಟ್ಟ ಕೆರೆ ಬಳಿಯಿರುವ ಗಂಗಾಧರೇಶ್ವರ ದೇವಸ್ಥಾನದ ಬಳಿ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯ ಶವ ಇತ್ತೀಚೆಗೆ ಪತ್ತೆಯಾಗಿದ್ದು, ವಾರಸುದಾರರು ಪತ್ತೆಯಾಗಿಲ್ಲ.
ಮೃತ ವ್ಯಕ್ತಿ ಸುಮಾರು 3- ವರ್ಷಗಳ ಹಿಂದೆ ತುರುವೇಕೆರೆಗೆ ಬಂದು ಸೇರಿಕೊಂಡಿದ್ದು, ಅಕ್ಕಪಕ್ಕದ ಹಳ್ಳಿಯಲ್ಲಿ ಹಾಗೂ ತುರುವೇಕೆರೆ ಟೌನ್ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಈತನು ತನ್ನ ಹೆಸರನ್ನು ಗುಬ್ಬಿ ಶ್ರೀನಿವಾಸ ಎಂದು ಹೇಳಿಕೊಂಡಿದ್ದು, ಸಂಬಂಧಿಕರ ಬಗ್ಗೆ ಆಗಲಿ ಹಾಗೂ ಈತನ ನಿಜವಾದ ವಿಳಾಸವಾಗಲಿ ತಿಳಿದಿಲ್ಲ.
ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ.