

ತುಮಕೂರು: ನಗರದ ಹೊರವಲಯದ ಅಂತಸರನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬತ್ತದ ಒಟ್ಟಿನಿಂದ ಎಣ್ಣೆ ತೆಗೆಯುವ ಪರಿಮಳ ಆಗ್ರೋ ಪುಡ್ ಫ್ಯಾಕ್ಟರಿಯಲ್ಲಿ ಆಯಿಲ್ ಟ್ಯಾಂಕರ್ ಸಿಡಿದು ಬಿಹಾರ ಮೂಲಕ ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಟನೆ ಮಂಗಳವಾರ ಸಂಜೆ ನಡೆದಿದೆ.
ಟನೆಯಲ್ಲಿ ಬಿಹಾರ ಮೂಲಕ ಕಾರ್ಮಿಕರಾದ ಸಂತೋಷ್(22), ಚಂದನ್ ಶರ್ಮ(26)ಮೃತರಾಗಿದ್ದಾರೆ. ಆಯಿಲ್ ಟ್ಯಾಂಕರ್ ಬಳಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಮಯಲ್ಲಿ ಏಕಾಏಕಿ ಟ್ಯಾಂಕರ್ ಸ್ಫೋಟಗೊಂಡಿದೆ. ಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.