

ತುಮಕೂರು: ತುರುವೇಕೆರೆ ತಾಲೂಕು ಹಂಚಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಶೀಥಲವಾಗಿದ್ದು ಮೇಲ್ಛಾವಣಿಯ ಪ್ಲಾಸ್ಟಿಂಗ್ ಕಿತ್ತುಬೀಳಲಾರಂಭಿಸಿದೆ. ಸೋಮವಾರ ವಿದ್ಯಾರ್ಥಿಗಳಿದ್ದ ಸಮಯದಲ್ಲಿ ಕಳಚಿ ಬಿದ್ದಿದ್ದು ಅದೃಷ್ಟಕ್ಕೆ ಯಾವುದೇ ಅಪಾಯವಾಗಿಲ್ಲ.
ಹಂಚಿಹಳ್ಳಿ ಸರ್ಕಾರಿ ಪ್ರೌಢಶಾಲೆ ಯಲ್ಲಿ 6 ಕೋಠಡಿಗಳಿದ್ದು ಬಹುತೇಕ ಎಲ್ಲ ಕೊಠಡಿಗಳು ಶಿಥಿಲವಾಗಿವೆ. ತರಗತಿ ನಡೆಯುವ ಸಮಯದಲ್ಲಿ ಶಾಲೆಯ ಕಟ್ಟದ ಭಾಗಗಳು ಕಳಚಿ ಬೀಳಲಾರಂಭಿಸಿದ್ದು ಮಕ್ಕಳು ಜೀವಭಯದಲ್ಲಿ ಕಲಿಯುವಂತಾಗಿದೆ.
ಶಾಲೆಯಲ್ಲಿ 8, 9 ,10 ನೇ ತರಗತಿಯ 60 ವಿದ್ಯಾರ್ಥಿಗಳು ವಿದ್ಯಬ್ಯಾಸ ಮಾಡುತ್ತಿz್ದÁರೆ. ಇತ್ತಿಚಿಗಷ್ಟೇ ತಾಲೂಕಿನ ಹಡವನಹಳ್ಳಿ ಅಂಗನವಾಡಿ ಕಟ್ಟದ ಮೇಲ್ಛಾವಣಿಯ ಪ್ಲಾಸ್ಟಿಂಗ್ ಕಳಚಿಬಿದ್ದು ಮಗು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿತ್ತು.