

ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಿಸಲಾಗುತ್ತಿರುವ ನಗರದ ಅಂತರಸನಹಳ್ಳಿಯಲ್ಲಿರುವ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಮಂಗಳವಾರ ದಿಢೀರ್ ಭೇಟಿನೀಡಿದರು.
ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಛಾವಣಿ ನಿರ್ಮಿಸಿಕೊಡಬೇಕು ಎಂಬ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಅವರು, ಕೂಡಲೇ ಮಾಡಿಸಿಕೊಡಲಾಗುವುದು ನಿಲಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಹಾಸ್ಟೆಲ್ ಕಟ್ಟಡದಲ್ಲಿ ಎಲೆಕ್ಟಿಕ್ ವೈಯರ್‌ಗಳು ವಿದ್ಯಾರ್ಥಿಗಳ ಕೈಗೆ ತಾಕುವಂತಿರುವುದನ್ನು ಗಮನಿಸಿ ವಾರ್ಡನ್ ಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು, ಬಿಸಿಒ ಇಲಾಖೆ ಜಿಲ್ಲಾ ಅಧಿಕಾರಿ ಗಂಗಪ್ಪ, ತಾಲೂಕು ಅಧಿಕಾರಿ ಗೀತಮ್ಮ ಮತ್ತಿತರರು ಇದ್ದರು.