

ತುಮಕೂರು: ತುರುವೇಕೆರೆ ತಾಲೂಕಿನ ಕ್ಯಾಮಸಂದ್ರದಲ್ಲಿ ಬೋನಿಗೆ ಬಿದ್ದು ಗಾಯಗೊಂಡಿದ್ದ ಚಿರತೆಗೆ ಚಿಕ್ಕನಾಯಕನಹಳ್ಳಿ ತಾಲೂಕು ತೀನಂಶ್ರೀ ಸಸ್ಯ ಕ್ಷೇತ್ರದಲ್ಲಿ ಅರಣ್ಯ ಇಲಾಖೆ ವತಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಕಾಲಿಗೆ ಮುಳ್ಳು ತಂತಿ ತಗುಲಿ ಗಾಯಗೊಂಡು ನರಳುತಿದ್ದ ಚಿರತೆಯನ್ನು ಅರಣ್ಯ ಇಲಾಖೆ ನಿಗಾವಹಿಸಿ ಚಿಕಿತ್ಸೆ ನೀಡುತ್ತಿದೆ. ಚಿರತೆಯನ್ನ ಆರೋಗ್ಯದ ಬಗ್ಗೆ ನಿಗಾವಹಿಸಿರುವ ಅರಣ್ಯಾಧಿಕಾರಿಗಳು ಪೂರ್ಣ ಗುಣಮುಖವಾದ ಬಳಿಕ ಚಿರತೆ ಕಾಡಿಗೆ ಬಿಡಲು ಚಿಂತನೆ.