

ತುಮಕೂರು: ಬೆಂಗಳೂರಿನ ಎಚ್ಎಎಲ್ ನಲ್ಲಿ ಫಿಟ್ಟರ್, ರ್ಟನರ್, ಮ್ಯಾಕ್ಯಾನಿಕ್, ಎಲೆಕ್ಟ್ರಾನಿಕ್, ವೆಲ್ಡರ್, ಸೀಟ್ ಮೆಟಲ್ ವರ್ಕರ್, ಟೂಲ್ ಅಂಡ್ ಡೈ ಮೇಕರ್ ಅಂಡ್ ಸಿಎನ್ಸಿ ಪ್ರೋಗ್ರಾಮರ್ ಕಂ ಆಪರೇಟರ್ ಟ್ರೇಡ್ನಲ್ಲಿ ಐ.ಟಿ.ಐ. ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರನ್ನು ಅಕ್ಟೋಬರ್ 7ರೊಳಗೆ ಡಿಡಿಡಿ.ಚಟಟ್ಟಛ್ಞಿಠಿಜ್ಚಿಛಿಠಜಜಿಟ.ಜಟಡ.ಜ್ಞಿ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು.
ನೋಂದಣಿ ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಭಾವಚಿತ್ರ, ಎಸ್.ಎಸ್.ಎಲ್.ಸಿ ಮತ್ತು ಐ.ಟಿ.ಐ ಅಂಕಪಟ್ಟಿ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸಲ್ಲಿಸಬಹುದು.
ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ದೂ.0816-2278488 ಸಂಪರ್ಕಿಸಿ.