

ತುಮಕೂರು: ಜವಹರ್ ನವೋದಯ ಶಾಲೆ ಹಾಗೂ ರಕ್ಷಣಾ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಸಹಭಾಗಿತ್ವದಲ್ಲಿ ಸೈನಿಕ್ ಶಾಲೆಗಳನ್ನು ನಡೆಸುತ್ತಿವೆ. ದೇಶದ ಭವಿಷ್ಯದ ಕೌಶಲ್ಯಯುತ ಮಾನವ ಸಂಪನ್ಮೂಲ ನಿರ್ಮಾಣದ ಉದ್ದೇಶದೊಂದಿಗೆ ಪ್ರತಿಭಾವಂತ ಮತ್ತು ಗ್ರಾಮೀಣ ವಿದ್ಯಾರ್ಥಿಗಳನ್ನು ರಾಷ್ಟç ಮಟ್ಟದ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿ ಗುಣಮಟ್ಟದ ಶಾಲಾ ಶಿಕ್ಷಣ ನೀಡಲಾಗುತ್ತಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯಬಹುದು. ಕೇಂದ್ರ ಸರ್ಕಾರದ ಮೀಸಲಾತಿ ಅನ್ವಯದಲ್ಲಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳು ಶಾಲೆಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ. ಗಣಿತ, ಮಾನಸಿಕ ಸಾಮರ್ಥ್ಯ ಪರೀಕ್ಷೆ, ಭಾಷೆ, ಸಮಾಜ, ವಿಜ್ಞಾನ, ಸಾಮಾನ್ಯ ಜ್ಞಾನ ವಿಷಯಗಳ ಆಧಾರದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.
2023-24ನೇ ಸಾಲಿನ ಪ್ರವೇಶಕ್ಕೆ ನೋಟಿಫಿಕೇ಼ಷನ್ ಸಧ್ಯದಲ್ಲಿ ಬರಲಿದೆ. ಅರ್ಹ ವಿದ್ಯಾರ್ಥಿಗಳಿಗೆ ವಿಜ್ಞಾನ ಬಿಂದು ಸಂಸ್ಥೆಯು ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಪಠ್ಯ ಪೂರಕ ತರಬೇತಿ ನೀಡುತ್ತಿದೆ.. ಆಸಕ್ತರು ವಿಜ್ಞಾನ ಬಿಂದು ಕಚೇರಿ, ಫ್ಲೆಓವರ್ ಹತ್ತಿರ, ಉಪ್ಪಾರಹಳ್ಳಿ, ತುಮಕೂರು. ಸಂಪರ್ಕಿಸಿ.