ಪೋರ್ಟಲ್​ ನಿರ್ವಹಣೆಗೆ ತರಬೇತಿ

training
Published on

ತುಮಕೂರು: ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪಿಯು ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ, ಉಪನ್ಯಾಸಕರು ಮತ್ತು ರೋಸ್ಟರ್​ ಸಮಿತಿಯ ಸದಸ್ಯರಿಗಾಗಿ SATS ಪೋರ್ಟಲ್​ ನಿರ್ವಹಣೆ ಹಾಗೂ ಹೆಚ್​ಆರ್​ಎಂಎಸ್​ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರ ಜೂ.14ರಂದು ಬೆಳಗ್ಗೆ 10ಕ್ಕೆ ನಗರದ ಎಂಪ್ರೆಸ್​ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು, ರೋಸ್ಟರ್​ ನಿಯಮಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ತರಬೇತಿಗೆ ಗೈರು ಹಾಜರಾಗಿ ರೋಸ್ಟರ್​ ಪದ್ಧತಿಯನ್ನು ಅನುಸರಿಸುವಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪ್ರಾಂಶುಪಾಲರುಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. ದಾಖಲಾತಿಯಲ್ಲಿ ರೋಸ್ಟರ್​ ನಿಯಮ ಪಾಲಿಸುವ ಬಗ್ಗೆ ಹಾಗೂ ಖಂಖಿಖ ಪೋರ್ಟಲ್​ನಲ್ಲಿ ಯಾವುದೇ ಸಂದೇಹ, ಗೊಂದಲಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಸವಿವರವಾಗಿ ನಮೂದಿಸಿಕೊಂಡು ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net