

ತುರುವೇಕೆರೆ: ವಿದ್ಯುತ್ ಕಂಬಗಳ ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಂಪಿಗೆ ಕೆರೆ ಕೋಡಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ದಂಡಿನಶಿವರ ಹೋಬಳಿ ತೋವಿನಕೆರೆ ಗೊಲ್ಲರಹಟ್ಟಿ ನಿವಾಸಿ ಕುಮಾರ್(40) ಮೃತ. ಈತನು ವಿದ್ಯುತ್ ಕಂಬಗಳ ನೆಡುವ ಕೆಲಸದ ಕಾರ್ಮಿಕನಾಗಿದ್ದು ಗುರುವಾರ ಬೆಳಗ್ಗೆ ಗುಬ್ಬಿ ತಾಲ್ಲೂಕಿಗೆ ವಿದ್ಯುತ್ ಕಂಬಗಳ ನೆಡುವ ಕೆಲಸ ತೆರಳಿದ್ದು ಸಂಜೆ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಹಿಂತಿರುಗುವಾಗ ಟ್ರ್ಯಾಕರ್ ಚಾಲಕನ ಅಜಾಗರುಕತೆಯಿಂದ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ವಿದ್ಯುತ್ ಕಂಬಗಳು ಕುಮಾರ್ ಮೈಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.