

ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ತಾಲೂಕು ಕಾರ್ಯ ನಿರ್ವಾಹಕ ಕಚೇರಿಯಲ್ಲಿ ರಾತ್ರಿ 9.30 ಗಂಟೆಯಾದರೂ ರಾಷ್ಟ್ರಧ್ವಜವನ್ನು ಕೆಳಗಿಳಿಸದೆ ಅದಿಕಾರಿಗಳು ಅಗೌರವ ತೋರಿದ್ದಾರೆ.
ಪ್ರತಿ ದಿನ ಬೆಳಿಗ್ಗೆ ರಾಷ್ಟ್ರದ್ವಜಾ ಹಾರಿಸಿ ಸಂಜೆ ಇಳಿಸಬೇಕು. ಆದರೆ ಸೋಮವಾರ ರಾತ್ರಿಯಾದರೂ ಸಮಯವಾದರೂ ರಾಷ್ಟ್ರಧ್ವಜ ಇನ್ನು ಕೆಳಗಿಳಿಸಿದೆ ಅಗೌರವ ತೋರಲಾಗಿದೆ.
ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಡಲಾಗಿದೆ.
ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿರುವ ತಾಲೂಕು ಕಾರ್ಯ ನಿರ್ವಾಹಕ ಕಚೇರಿ ಅಧಿಕಾರಿಗಳೋ ಅಥವಾ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.