ತೋಟಗಾರಿಕಾ ಬೆಳೆಗಳಿಗೆ ವಿಮಾ ಅವಧಿ ವಿಸ್ತರಣೆ

Horticulter
Published on

ತುಮಕೂರು: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಧಿಸೂಚನೆ ಹೊರಡಿಸಿರುವ ಬೆಳೆಗಳನ್ನು ವಿಮಾ ಸೌಲಭ್ಯಕ್ಕೊಳಪಡಿಸಲು ಅವಧಿ ವಿಸ್ತರಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ ತಿಳಿಸಿದ್ದಾರೆ.

ಅಡಕೆ, ದಾಳಿಂಬೆ ಮತ್ತು ಪರಂಗಿ ಬೆಳೆಗಳಿಗೆ ನೋಂದಾಯಿಸಿಕೊಳ್ಳಲು ಜು. 5 ಹಾಗೂ ಮಾವು ಬೆಳೆಗೆ ನೋಂದಾಯಿಸಿಕೊಳ್ಳಲು ಜು.31 ಕಡೆಯ ದಿನವಾಗಿದೆ. ವಿಮಾ ಸೌಲಭ್ಯವು ಸಾಲ ಪಡೆಯುವ ರೈತರಿಗೆ ಕಡ್ಡಾಯ ಹಾಗೂ ಬೆಳೆಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿರುತ್ತದೆ.

ತುಮಕೂರು, ಕುಣಿಗಲ್ ಹಾಗೂ ಕೊರಟಗೆರೆಯಲ್ಲಿ ಅಡಕೆ, ಮಾವು, ಗುಬ್ಬಿ, ತುರುವೇಕೆರೆ, ಪಾವಗಡ, ಶಿರಾ, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಅಡಿಕೆ, ಮಾವು, ಪಪ್ಪಾಯ, ದಾಳಿಂಬೆ. ಮಧುಗಿರಿಯಲ್ಲಿ ಅಡಕೆ, ಮಾವು ಮತ್ತು ದಾಳಿಂಬೆ ಬೆಳೆ ವಿಮಾ ಸೌಲಭ್ಯಕ್ಕೆ ಒಳಪಡಿಸಲಾಗಿದೆ.

ವಿಮಾಯೋಜನೆಗೊಳಪಟ್ಟ ವಿವಿಧ ಬೆಳೆಗಳ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ದ ವಿವರ ಇಂತಿದ್ದು, ಆವರಣದಲ್ಲಿ ಶೇ.5ರಂದು ರೈತರು ಪಾವತಿಸಬೇಕಾದ ವಿಮಾ ಕಂತಿನ ದರದ ವಿವರ ನೀಡಲಾಗಿದೆ.
ಅಡಕೆ ಬೆಳೆ-128000 ರೂ.(ವಿಮಾ ಕಂತಿನ ದರ 6400 ರೂ.), ದಾಳಿಂಬೆ-127000 ರೂ.(6350 ರೂ.), ಪರಂಗಿ-134000 ರೂ.(6700 ರೂ.), ಮಾವು-80000 ರೂ.(4000 ರೂ.)


ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತುಮಕೂರು-9448253277, 9538617871, ಗುಬ್ಬಿ 9535781963, 7259243329, ಕುಣಿಗಲ್9342959690, 9980073909, ತಿಪಟೂರು 9845014293, 9964791910, ಚಿಕ್ಕನಾಯಕನಹಳ್ಳಿ 9686056705, 9538272964, ಮಧುಗಿರಿ 9916378199, 8095513992, ತುರುವೇಕೆರೆ 9448416334, 9844174972, ಕೊರಟಗೆರೆ 9448001644, 9480243429, ಪಾವಗಡ 9448448970, 9886736664 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net